Overseas Travel Insurance Policy
IFFCO- ಟೊಕಿಯೊ ಜನರಲ್ ಇನ್ಶೂರೆನ್ಸ್ ಟ್ರಾವೆಲ್ ಇನ್ಶುರೆನ್ಸ್ ಪಾಲಿಸಿಯು ಸರಿಯಾದ ರೀತಿಯ ನೀತಿಯನ್ನು ಹೊಂದಿದೆ......... ಮತ್ತಷ್ಟು ಓದು
ಪ್ರವಾಸಿ ಭಾರತೀಯ ಬಿಮಾ ಯೋಜನೆ
ಕೆಲಸವು ನಿಮ್ಮನ್ನು ಭಾರತಕ್ಕೆ ಹೊರಗೆ ಕರೆದಾಗ ಅಪಾಯಗಳು ಅಥವಾ ಅಪಾಯಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು... ಮತ್ತಷ್ಟು ಓದು

IFFCO TOKIO ದಿಂದ ಆನ್ ಲೈನ್ ಪ್ರಯಾಣ ವಿಮಾ ಪಾಲಿಸಿ

ಹಿಂದಿನ ಪ್ರವೃತ್ತಿಗಳ ಮೇಲೆ ಮೆಲಕುಹಾಕುತ್ತಾ, ಪ್ರಯಾಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ - ವೈಯಕ್ತಿಕ ಮತ್ತು ವೃತ್ತಿಪರ ಕಾರ್ಯಗಳೂ ಇದರಲ್ಲಿ ಒಳಗೊಂಡಿದೆ. ಪ್ರಯಾಣಿಸಲು, ಅನ್ವೇಷಿಸಲು ಹಾಗು ದುಸ್ತರ ಹಾಗು ದೂರದ ಸ್ಥಳಗಳನ್ನು ಜಯಿಸಲು ವ್ಯಕ್ತಿಯ ತುಡಿತವು ದಿನೇ ದಿನೇ ಹೆಚ್ಚಾಗಲು, ಅದಕ್ಕೆ ಸಂಬಂಧಿಸಿದ ಪೂರಕ ಹಾನಿಗಳಲ್ಲಿ ಅಸಾಧಾರಣವಾದ ಏರಿಕೆ ಕಂಡುಬಂದಿದೆ.ಒಟ್ಟಾರೆ ಅಗತ್ಯತೆಗಳ ಹೆಚ್ಚಳದಿಂದಾಗಿ, ಪ್ರಯಾಣವು ನಷ್ಟಕ್ಕೆ ತುತ್ತಾಗುವ ಸಂಭವವಿರುತ್ತದೆ, ಅಂದರೆ ಪ್ರಯಾಣ ವಿಮೆ.

ಪ್ರಸಕ್ತ ಸನ್ನಿವೇಶದಲ್ಲಿ ಪ್ರಯಾಣ ವಿಮೆ ಪಾಲಿಸಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ; ನೀವು ಕಷ್ಟಾಪಟ್ಟು ಸಂಪಾದಿಸಿದ ರಜೆ ಅಥವಾ ನಿರ್ಣಾಯಕ ವ್ಯಾಪಾರ ಸಭೆಯನ್ನು ಹಾಳುಮಾಡಬಹುದಾದ ಕೆಲವು ಅನಿರೀಕ್ಷಿತ ಘಟನೆಯ ಸಾಧ್ಯತೆಗೆ ನಾವು ಅಂಜುತ್ತೇವೆ. ಅನಿಶ್ಚಿತತೆಯು ಸಮಯದ ಯಾವುದೇ ಸಂದರ್ಭಗಳಲ್ಲಿಯೂ ಕೂಡ ಸಂಭವಿಸಬಹುದು. ಹೀಗಾಗಿ ನಿಮ್ಮನ್ನು ಅಂತಹ ಚಿಂತೆಗಳಿಂದ ದೂರಮಾಡಲು, IFFCO TOKIOದ ಆನ್ಲೈನ್ ಪ್ರಯಾಣ ವಿಮಾ ಯೋಜನೆಯು ನಿಮಗೆ ಆದರ್ಶ ಬೆಂಬಲವನ್ನು ಒದಗಿಸುತ್ತದೆ.

ಆನ್ ಲೈನ್ ಪ್ರವಾಸಿ ವಿಮಾ ಪಾಲಿಸಿ

ಯಾವುದೇ ಅನಿರೀಕ್ಷಿತ ಸಂದರ್ಭಗಳು ನಿಮ್ಮ ಪ್ರಯಾಣ ಯೋಜನೆಗಳನ್ನುIFFCO TOKIO ಆನ್ ಲೈನ್ ಪ್ರಯಾಣ ವಿಮೆ ಪಾಲಿಸಿಯು ನಿಮ್ಮ ಯೋಜನೆಗಳಿಗೆ ಕ್ಷಣಮಾತ್ರದಲ್ಲಿ ಕವರೇಜ್ ಅನ್ನು ನೀಡುತ್ತದೆ. ಈ ಯೋಜನೆಯು ಆನ್ ಲೈನ್ ನಲ್ಲಿ ಲಭ್ಯವಿದೆ ಏಕೆಂದರೆ, ನಿಮಗೆ ವಿಮಾ ಪ್ರತಿನಿಧಿಗಳ ಹಿಂದೆ ಹೋಗಲು ಅಥವಾ ವಿವಿಧ ಕೈಪಿಡಿಗಳನ್ನು ಓದಲು ಸಮಯವಿರುವುದಿಲ್ಲ ಎಂಬ ವಿಷಯವನ್ನು ನಾವು ಬಲ್ಲೆವು. ಕೇವಲ, IFFCO TOKIOದ ಅಂತರ್ಜಾಲ ತಾಣವನ್ನು ಪ್ರವೇಶಿಸಿ ಮತ್ತು ಅದರಲ್ಲಿ ಪ್ರಯಾಣ ವಿಮಾ ಯೋಜನೆಯ ಮೂಲಕ ದಾಖಲಿಸಿ ನಿಮ್ಮ ಯೋಜಿತ ರಜೆಗಾಗಿ ಪರಿಪೂರ್ಣ ಕವರೇಜ್ ಅನ್ನು ಪಡೆದುಕೊಳ್ಳಿ.

ಇದು ಏನನ್ನು ವಿಮೆ ಮಾಡುತ್ತದೆ?

ನಮ್ಮ ಈ ಪ್ರವಾಸ ವಿಮೆ ಯೋಜನೆಯು ಸಾಗರೋತ್ತರ ಅಥವಾ ದೇಶೀಯದ ಯಾವುದೇ ಪ್ರಯಾಣದ ಮೇಲೆ ಬಂದೆರಗುವ ಅಪಾಯಗಳಿಗೆ ಕವರೇಜ್ ಅನ್ನು ಒದಗಿಸುತ್ತದೆ. ನೀವು ವೈಯಕ್ತಿಕ ಅಪಘಾತಗಳು, ವೈದ್ಯಕೀಯ ಖರ್ಚುಗಳು, ವಾಪಸಾತಿ, ಸಾಮಾನು ಸರಂಜಾಮುಗಳ ನಷ್ಟ / ವಿಳಂಬ, ಪಾಸ್ ಪೋರ್ಟ್ ನಷ್ಟ ಮತ್ತು ಮೂರನೇ ವ್ಯಕ್ತಿಯ ಹೊಣೆಗಾರಿಕೆಗೆಗಳಿಗೆ ಕವರ್ ಅನ್ನು ಹೊಂದಿರುತ್ತೀರ.

IFFCO TOKIO ಪ್ರಯಾಣ ವಿಮೆ ಯೋಜನೆಗಳು ನೀವು ಪ್ರವಾಸದಲ್ಲಿರುವಾಗ ಯಾವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವುದಿಲ್ಲದಂತೆ ಸುನಿಶ್ಚಿತಗೊಳಿಸುತ್ತದೆ. ಹಲವಾರು ಅಪಾಯ ಕವರೇಜ್ ಯೋಜನೆಗಳ ವ್ಯಾಪ್ತಿಯೊಂದಿಗೆ, ನಿಮಗೆ ವೈದ್ಯಕೀಯ ಖರ್ಚುಗಳ ವಿರುದ್ಧ ರಕ್ಷಣೆ ನೀಡುವುದು ಮತ್ತು ಪ್ರಯಾಣವನ್ನು ಪರಿಪೂರ್ಣವಾಗಿ ಆನಂದಿಸಲು ಸಹಾಯ ಮಾಡುವುದಕ್ಕೆ ನೆರವಾಗುವ ನಮ್ಮ ಪ್ರಯಾಣ ವಿಮಾ ಪಾಲಿಸಿಯು ನಿಮಗೆ ಸಮಗ್ರ ಪ್ಯಾಕೇಜ್ ಅನ್ನು ಒದಗಿಸುತ್ತದೆ. IFFCO TOKIO ಅತ್ಯುತ್ತಮ ಪ್ರಯಾಣ ವಿಮೆ ಪಾಲಿಸಿಯನ್ನು ಮತ್ತು ಪ್ರಯಾಣ ವಿಮೆಯನ್ನು ಆನ್ ಲೈನ್ ನಲ್ಲಿ ಖರೀದಿಸಲು ಜಗಳ ಮುಕ್ತ, ಬಳಕೆದಾರ ಸ್ನೇಹಿ ಆನ್ ಲೈನ್ ಸೇವೆಯನ್ನು ಒದಗಿಸುತ್ತದೆ.

IFFCO TOKIOದಲ್ಲಿ, ನಾವು, ಹಲವಾರು ಆನ್ಲೈನ್ ಪ್ರಯಾಣ ವಿಮಾ ಯೋಜನೆಗಳನ್ನು ಸಂಕ್ಷಿಪ್ತವಾಗಿ ಈ ರೀತಿಯಾಗಿ ಹೇಳಲು ಬಹು ಸಂತೋಷವೆನಿಸುತ್ತದೆ;.ಪ್ರವಾಸದ ಸಮಯದಲ್ಲಿ ನಿಮ್ಮ ಸರಳ ಅಗತ್ಯಗಳನ್ನು ವಿಮೆಗೊಳಿಸುವುದಲ್ಲದೆ ಯಾವುದೇ ಅನಿರೀಕ್ಷಿತ ಸನ್ನಿವೇಶಗಳಿಗೆ ನಿಮಗೆ 'ಒಟ್ಟಾರೆ' ವ್ಯಾಪ್ತಿಯನ್ನು ಒದಗಿಸುತ್ತದೆ.


Download Motor Policy

Feedback