ಬಳಕೆಯ ನಿಯಮಗಳು

PrintPrintEmail this PageEmail this Page

ಪರಿಚಯ

ಈ ವೆಬ್ ಸೈಟ್ ಅನ್ನು ಇಫ್ಕೊ ಟೊಕಿಯೊ ಆಸಕ್ತ ಸಾರ್ವಜನಿಕರಿಗೆ ತನ್ನ ಕುರಿತು ಹಾಗು ತಾನು ಪ್ರಸ್ತುತಪಡಿಸುತ್ತಿರುವ ಉತ್ಪನ್ನಗಳು ಹಾಗು ಸೇವೆಗಳ ಕುರಿತು ಮಾಹಿತಿಯನ್ನು ನೀಡಲು ಈ ಅಂತರ್ಜಾಲ ತಾಣವನ್ನು ಇಫ್ಕೊ ಟೊಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿಯು ರಚಿಸಿ ನಿರ್ವಹಿಸುತ್ತಿದೆ.ನೀವು ಈ ಅಂತರ್ಜಾಲ ತಾಣವನ್ನು ಬಳಸಬಹುದು; ಪರಂತು, ಅದರ ನಿಯಮಗಳು ಮತ್ತು ಷರತ್ತುಗಳಿಗೆ ನೀವು ಬದ್ಧರಾಗಿರಬೇಕು.

ಈ ನಿಯಮಗಳು ಮತ್ತು ಷರತ್ತುಗಳ ನಿಮ್ಮ ಅಂಗೀಕಾರ.
ದಯಾಮಾಡಿ ಈ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಪರಾಮರ್ಶಿಸಲು ಕೆಲವು ಸಮಯವನ್ನು ವ್ಯಯಿಸಿ. ಈ ಅಂತರ್ಜಾಲ ತಾಣವನ್ನು ಪ್ರವೇಶಿಸುವ ಹಾಗು ಬಳಸುವ ಮೂಲಕ ಈ ಷರತ್ತುಗಳಿಗೆ ಹಾಗು ನಿಯಮಗಳನ್ನು ಅನುಸರಿಸಲು ಬದ್ಧರಾಗಿರುತ್ತೀರ. ಒಂದು ವೇಳೆ ಈ ನಿಯಮಗಳನ್ನು ಮತ್ತು ಷರತ್ತುಗಳನ್ನು ಅನುಸರಿಸಲು ನೀವು ಒಪ್ಪಿಕೊಳ್ಳದಿದ್ದ ಪಕ್ಷದಲ್ಲಿ, ನೀವು ಈ ಅಂತರ್ಜಾಲ ತಾಣವನ್ನು ಪ್ರವೇಶಿಸಬಾರದು, ಬಳಸಬಾರದು ಅಥವಾ ವಸ್ತುಗಳನ್ನು ಡೌನ್ ಲೋಡ್ ಮಾಡಬಾರದು.

ಈ ನಿಯಮಗಳು ಮತ್ತು ಷರತ್ತುಗಳು ಬದಲಾಗಬಹುದು
ಮುಂಚಿತ ಸೂಚನೆ ನೀಡದೆ ಯಾವುದೇ ಸಮಯದಲ್ಲಾದರೂ ಈ ನಿಯಮಗಳು ಮತ್ತು ಷರತ್ತುಗಳನ್ನು ನವೀಕರಿಸಲು ಅಥವಾ ಮಾರ್ಪಡಿಸುವ ಹಕ್ಕನ್ನು ಇಫ್ಕೊ ಟೊಕಿಯೊ ಹೊಂದಿದೆ. ಅಂತಹ ಬದಲಾವಣೆಯು ಹೊಂದಿದ ತದನಂತರ ಈ ಅಂತರ್ಜಾಲ ಪುಟದ ಬಳಕೆಯು ಅಂತಹ ಬದಲಾದ ನಿಯಮಗಳು ಮತ್ತು ಷರತ್ತುಗಳಿಂದ ಬದ್ಧರಾಗಬೇಕು ಮತ್ತು ಅದನ್ನು ಅನುಸರಿಸಲು ನಿಮ್ಮ ಒಪ್ಪಂದವಾಗುತ್ತದೆ. ಈ ಕಾರಣಕ್ಕಾಗಿ, ನೀವು ಈ ಅಂತರ್ಜಾಲ ತಾಣವನ್ನು ಪ್ರತಿ ಬಾರಿ ಬಳಸುವ ಮೊದಲು ಈ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ನಾವು ಪ್ರೋತ್ಸಾಹಿಸುತ್ತೇವೆ. ಈ ನಿಯಮಗಳು ಮತ್ತು ಷರತ್ತುಗಳನ್ನು ಕೊನೆಯದಾಗಿ 2005 ರ ಸೆಪ್ಟೆಂಬರ್ 25 ರಂದು ಪರಿಷ್ಕರಿಸಲ್ಪಟ್ಟಿವೆ.

ಹಕ್ಕುಸ್ವಾಮ್ಯ ಸೂಚನೆ ಮತ್ತು ಸೀಮಿತ ಪರವಾನಗಿ
ಎಲ್ಲಾ ಪಠ್ಯ, ಕೋಶಗಳು, ಛಾಯಾಚಿತ್ರಗಳು, ವಿವರಣೆಗಳು, ಗ್ರಾಫಿಕ್ಸ್, ಶ್ರವಣ ತುಣುಕುಗಳು, ವೀಡಿಯೊ ತುಣುಕುಗಳು, ಮತ್ತು ಆಡಿಯೋ-ವೀಡಿಯೋ ಕ್ಲಿಪ್ ಗಳು ಸೇರಿದಂತೆ ಈ ಪುಟದಲ್ಲಿ ("ವಿಷಯ") ನೀವು ನೋಡುವ ಮತ್ತು ವೀಕ್ಷಿಸುವ ಎಲ್ಲ ವಿಷಯಗಳನ್ನು, ಭಾರತೀಯ ಕಾನೂನುಗಳು ಮತ್ತು ಅನ್ವಯವಾಗುವ ಅಂತರರಾಷ್ಟ್ರೀಯ ಹಕ್ಕುಸ್ವಾಮ್ಯ ಕಾನೂನುಗಳು ಮತ್ತು ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಕೃತಿಸ್ವಾಮ್ಯಗೊಳಿಸಲಾಗಿದೆ. ವಿಷಯದಲ್ಲಿನ ಕೃತಿಸ್ವಾಮ್ಯಗಳನ್ನು ಇಫ್ಕೊ ಟೊಕಿಯೊ ಜನರಲ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಅಥವಾ ಅದರ ಅಂಗಸಂಸ್ಥೆಗಳಿಂದ ಅಥವಾ ಇಫ್ಕೊ ಟೊಕಿಯೊ ಗೆ ತಮ್ಮ ವಸ್ತುಗಳನ್ನು ಪರವಾನಗಿ ಪಡೆದ ಮೂರನೇ ವ್ಯಕ್ತಿಗಳ ಒಡೆತನದಲ್ಲಿದೆ. ಈ ಪುಟದಲ್ಲಿರುವ ಸಂಪೂರ್ಣ ವಿಷಯವು ಭಾರತೀಯ ಕಾನೂನುಗಳು ಮತ್ತು ಅನ್ವಯವಾಗುವ ಅಂತರರಾಷ್ಟ್ರೀಯ ಹಕ್ಕುಸ್ವಾಮ್ಯ ಕಾನೂನುಗಳು ಮತ್ತು ಒಪ್ಪಂದಗಳ ಅಡಿಯಲ್ಲಿ ಒಂದು ಸಾಮೂಹಿಕ ಕಾರ್ಯವಾಗಿ ಹಕ್ಕುಸ್ವಾಮ್ಯಗೊಂಡಿದೆ. ವಿಷಯದ ಆಯ್ಕೆ, ಸಂಯೋಜನೆ, ವ್ಯವಸ್ಥೆ ಮತ್ತು ಅದರ ವರ್ಧನೆಗೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯವನ್ನು ಇಫ್ಕೊ ಟೊಕಿಯೊ ಹೊಂದಿದೆ.

ಈ ಅಂತರ್ಜಾಲ ಪುಟದ ಆಯ್ದ ಭಾಗಗಳನ್ನು ನೀವು ಡೌನ್ಲೋಡ್ ಮಾಡಬಹುದು, ಸಂಗ್ರಹಿಸಬಹುದು, ಮುದ್ರಿಸಬಹುದು ಮತ್ತು ನಕಲಿಸಬಹುದು; ಪರಂತು ನೀವು:

ನೀವು ಡೌನ್ ಲೋಡ್ ಮಾಡಿದ ವಿಷಯವನ್ನು ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗಾಗಿ ಅಥವಾ ಇಫ್ಕೊ ಟೊಕಿಯೊ ದೊಡನೆ ನಿಮ್ಮ ವ್ಯವಹಾರಗಳನ್ನು ವೃದ್ಧಿಸಲು ಮಾತ್ರ ಬಳಸಿಕೊಳ್ಳಿ

ಇಫ್ಕೊ ಟೊಕಿಯೊ ದ ಪೂರ್ವ ಲಿಖಿತ ಒಪ್ಪಿಗೆಯನ್ನು ಪಡೆದ ಹೊರತಾಗಿ ನೀವು ಯಾವುದೇ ಇತರ ಅಂತರ್ಜಾಲ ತಾಣದಲ್ಲಿ ವಿಷಯದ ಯಾವುದೇ ಭಾಗವನ್ನು ಪ್ರಕಟಿಸಬೇಡಿ ಅಥವಾ ಪೋಸ್ಟ್ ಮಾಡಬೇಡಿ.

ಇಫ್ಕೊ ಟೊಕಿಯೊ ದ ಪೂರ್ವ ಲಿಖಿತ ಒಪ್ಪಿಗೆಯನ್ನು ಪಡೆದ ಹೊರತಾಗಿ ನೀವು ಯಾವುದೇ ಇತರ ಮಾಧ್ಯಮದಲ್ಲಿ ವಿಷಯದ ಯಾವುದೇ ಭಾಗವನ್ನು ಪ್ರಕಟಿಸಬೇಡಿ ಅಥವಾ ಪ್ರಸಾರ ಮಾಡಬೇಡಿ.

ಯಾವುದೇ ಗೌಪ್ಯತೆಯ ಪ್ರಕಟಣೆಗಳು ಅಥವಾ ಕೃತಿಸ್ವಾಮ್ಯ ಅಥವಾ ವ್ಯಾಪಾರ ಚಿಹ್ನೆ ಪ್ರಕಟಣೆಗಳನ್ನು ಅಳಿಸಬೇಡಿ ಅಥವಾ ಮಾರ್ಪಡಿಸಬೇಡಿ ಅಥವಾ ಯಾವುದೇ ರೀತಿಯಲ್ಲಿ ವಿಷಯವನ್ನು ಮಾರ್ಪಡಿಸಬೇಡಿ.

ನೀವು ಅಂತರ್ಜಾಲ ತಾಣದಿಂದ ವಿಷಯವನ್ನು ಡೌನ್ ಲೋಡ್ ಮಾಡಿದ ಮಾತ್ರಕ್ಕೆ ಆ ಡೌನ್ ಲೋಡ್ ಮಾಡಿದ ವಿಷಯದ ಹಕ್ಕು, ಶೀರ್ಷಿಕೆ ಅಥವಾ ಪಾಲು ನಿಮಗೆ ವರ್ಗಾವಣೆಯಾಗವುದಿಲ್ಲ. ಈ ಅಂತರ್ಜಾಲ ಪುಟದಿಂದ ನೀವು ಡೌನ್ ಲೋಡ್ ಮಾಡಿದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಇಫ್ಕೊ ಟೊಕಿಯೊ ಹೊಂದಿದೆ.

ಮೇಲೆ ಸ್ಪಷ್ಟವಾಗಿ ಹೇಳಿಕೆ ನೀಡದ ಹೊರತಾಗಿ, ಇಫ್ಕೊ ಟೊಕಿಯೊ ದಿಂದ ಮೊದಲು ಲಿಖಿತ ಅನುಮತಿ ಪಡೆಯದೆ ನೀವು ಈ ಅಂತರ್ಜಾಲ ತಾಣದ ಯಾವುದೇ ವಿಷಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅಳವಡಿಸಿಕೊಳ್ಳಲು ಅಥವಾ ಯಾವುದೇ ರೀತಿಯಲ್ಲಿ ಮಾರ್ಪಡಿಸಲು ಅಥವಾ ನಕಲು ಮಾಡುವುದು, ಡೌನ್ಲೋಡ್ ಮಾಡುವುದು, ಮುದ್ರಿಸುವುದು, ಪ್ರಕಟಿಸುವುದು, ಪ್ರದರ್ಶಿಸುವುದು, ನಿರ್ವಹಿಸುವುದು, ವಿತರಿಸುವುದು, ರವಾನಿಸುವುದು, ವರ್ಗಾವಣೆ ಮಾಡುವುದು, ಭಾಷಾಂತರಿಸುವುದು, ಮಾರ್ಪಡಿಸಿ, ಸೇರಿಸಿ, ನವೀಕರಿಸಿ, ಸಂಕಲಿಸಿ, ಸಂಕ್ಷೇಪಿಸುವಂತಿಲ್ಲ.

ವ್ಯಾಪಾರ ಚಿಹ್ನೆ ಸೂಚನೆ
ಈ ಅಂತರ್ಜಾಲ ಪುಟದಲ್ಲಿ ("ವ್ಯಾಪಾರ ಚಿಹ್ನೆ(ಗಳು)") ಪ್ರದರ್ಶಿಸಲಾಗುವ ಎಲ್ಲಾ ವ್ಯಾಪಾರ ಚಿಹ್ನೆಗಳು, ಸೇವಾ ಗುರುತುಗಳು ಮತ್ತು ಲೋಗೊಗಳು ಇಫ್ಕೊ ಟೊಕಿಯೊ ಅಥವಾ ಅದರ ಒಂದು ಅಂಗಸಂಸ್ಥೆಯ ಅಥವಾ ತಮ್ಮ ವ್ಯಾಪಾರ ಚಿಹ್ನೆಯನ್ನು ಇಫ್ಕೊ ಟೊಕಿಯೊ ಗೆ ಪರವಾನಗಿ ನೀಡಿದ ಮೂರನೇ ವ್ಯಕ್ತಿಗಳ ನೋಂದಾಯಿಸಿದ ಮತ್ತು ನೋಂದಾಯಿಸದ ವ್ಯಾಪಾರ ಚಿಹ್ನೆಯಾಗಿದೆ. ಈ ನಿಯಮಗಳು ಮತ್ತು ಷರತ್ತುಗಳಲ್ಲಿ ಸ್ಪಷ್ಟವಾಗಿ ಸೂಚಿಸದ ಹೊರತಾಗಿ, ಇಫ್ಕೊ ಟೊಕಿಯೊ ದಿಂದ ಲಿಖಿತ ಅನುಮತಿಯನ್ನು ಪಡೆಯುವ ಮೊದಲು ಯಾವುದೇ ವ್ಯಾಪಾರ ಚಿಹ್ನೆಯನ್ನು ನೀವು ಪುನರುತ್ಪಾದಿಸಲು, ಪ್ರದರ್ಶಿಸಲು ಅಥವಾ ಉಪಯೋಗಕ್ಕೆ ನೀವು ಬಳಸಬಾರದು. ಈ ಅಂತರ್ಜಾಲ ತಾಣದ ಕಾರ್ಯಾಚರಣೆಯನ್ನು ನೀವು ಯಾವುದೇ ಕಾರಣಕ್ಕೂ ಕೂಡ ಅಡ್ಡಿಪಡಿಸುವುದು/ ಅಡ್ಡಿಪಡಿಸಲು ಪ್ರಯತ್ನಿಸುವುದನ್ನು ಮಾಡದಿರಲು ನೀವು ಒಪ್ಪಿಕೊಳ್ಳುತ್ತೀರಿ.

ಅಪೇಕ್ಷಿಸದ ವಿಚಾರಗಳು
ಈ ಅಂತರ್ಜಾಲ ತಾಣಕ್ಕೆ ಸಂಬಂಧಿಸಿದಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇಫ್ಕೊ ಟೊಕಿಯೊ ಸದಾ ಸ್ವಾಗತಿಸುತ್ತದೆ. ಈ ಅಂತರ್ಜಾಲ ತಾಣದ ಮೂಲಕ ಇಫ್ಕೊ ಟೊಕಿಯೊ ಗೆ ಸಲ್ಲಿಸಲಾದ ಟಿಪ್ಪಣಿಗಳು, ಆಲೋಚನೆಗಳು, ಪ್ರಶ್ನೆಗಳು, ವಿನ್ಯಾಸಗಳು, ಮತ್ತು ಇತರೆ ವಿಚಾರಗಳು ಸೇರಿದಂತೆ ಎಲ್ಲಾ ಮಾಹಿತಿಗಳು ಹಾಗು ವಿಷಯಗಳನ್ನುಸ್ವಾಮ್ಯವಲ್ಲದ ಹಾಗು ರಹಸ್ಯವಲ್ಲದ ವಿಚಾರಗಳಾಗಿ ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಮೂಲ ಕಲಾಕೃತಿ, ಕಂಪ್ಯೂಟರ್ ಕೋಡ್ ಅಥವಾ ಕಲ್ಪನೆಗಳಂತಹ ಉತ್ಪನ್ನಗಳಂತಹ ಯಾವುದೇ ಮೂಲ ಸೃಜನಾತ್ಮಕ ವಸ್ತುಗಳು ಅಥವಾ ಯಾವುದೇ ಗೌಪ್ಯ ಮಾಹಿತಿಗಳು ಸೇರಿದಂತೆ ನಮಗೆ ನೀವು ನಿಯೋಜಿಸಲು ಬಯಸದ ಯಾವುದೇ ಮಾಹಿತಿ ಅಥವಾ ವಿಚಾರಗಳನ್ನು ನಮಗೆ ಕಳುಹಿಸಬಾರದು ಎಂದು ನಾವು ನಿಮ್ಮನ್ನು ಕೇಳುತ್ತೇವೆ.

ಈ ಅಂತರ್ಜಾಲ ತಾಣದ ಮೂಲಕ ಇಫ್ಕೊ ಟೊಕಿಯೊ ಗೆ ಮಾಹಿತಿಗಳು ಹಾಗು ವಿಚಾರಗಳನ್ನು ಸಲ್ಲಿಸುವುದರೊಂದಿಗೆ, ನೀವು ಸಲ್ಲಿಸಿದ ಮಾಹಿತಿ ಅಥವಾ ವಿಚಾರಗಳಿಗೆ ಸಂಬಂಧಿಸಿದಂತೆ ಅಂತಹುವುಗಳ ಮೇಲಿರುವ ಎಲ್ಲಾ ಕೃತಿಸ್ವಾಮ್ಯಗಳು ಮತ್ತು ಇತರ ಬೌದ್ಧಿಕ ಆಸ್ತಿ ಹಕ್ಕುಗಳ ಮೇಲಿನ ಅಧಿಕಾರ ಹಾಗು ಹಿತಾಸಕ್ತಿಯನ್ನು, ವಿಶ್ವಾದ್ಯಂತ ಉಚಿತವಾಗಿ ಇಫ್ಕೊ ಟೊಕಿಯೊ ಗೆ ನೀವು ಹಂಚುತ್ತೀರ. ಈ ಅಂತರ್ಜಾಲ ತಾಣದ ಮೂಲಕ ಇಫ್ಕೊ ಟೊಕಿಯೊ ಗೆ ನೀವು ಸಲ್ಲಿಸುವ ಯಾವುದೇ ಮಾಹಿತಿ ಅಥವಾ ವಿಚಾರಗಳನ್ನು ಇಫ್ಕೊ ಟೊಕಿಯೊ ಯಾವುದೇ ಉದ್ದೇಶಕ್ಕಾಗಿ, ನಿರ್ಬಂಧವಿಲ್ಲದೆಯೇ ಮತ್ತು ಯಾವುದೇ ರೀತಿಯಲ್ಲಿಯು ಕೂಡ ನಿಮಗೆ ಯಾವುದೇ ರೀತಿಯ ಪರಿಹಾರವನ್ನೂ ನೀಡದೆ ಬಳಸಿಕೊಳ್ಳಬಹುದು.

ಜಾಗತಿಕ ಲಭ್ಯತೆ
ವಿಶ್ವದಾದ್ಯಂತದ ವಿವಿಧ ದೇಶಗಳು ವಿಭಿನ್ನ ರೀತಿಯ ಕಾನೂನುಗಳು ಮತ್ತು ನಿಯಂತ್ರಕ ಅಗತ್ಯತೆಗಳನ್ನು ಹೊಂದಿರುವ ಕಾರಣ, ಕೆಲವು ವಿಮೆ ಉತ್ಪನ್ನಗಳು ಮತ್ತು ಅಭ್ಯಾಸ / ಸೇವೆಗಳು ಕೆಲವು ದೇಶಗಳಲ್ಲಿ ಲಭ್ಯವಿವೆ ಮತ್ತು ಇತರವುಗಳಲ್ಲಿ ಲಭ್ಯವಿರುವುದಿಲ್ಲ. ಕೆಲವು ವಿಮಾ ಉತ್ಪನ್ನಗಳು ಮತ್ತು ಪದ್ಧತಿಗಳು/ ಸೇವೆಗಳು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಇತರೆಡೆಗಳಲ್ಲಿ ಇವುಗಳು ಲಭ್ಯವಿರುವುದಿಲ್ಲ. ಈ ಅಂತರ್ಜಾಲ ತಾಣದಲ್ಲಿ ಕೆಲವೊಂದು ಬಾರಿ ನಿಮ್ಮ ದೇಶದಲ್ಲಿ ಲಭ್ಯವಿರದ ಅಥವಾ ಘೋಷಿಸಿರದಂತಹ ಇಫ್ಕೊ ಟೊಕಿಯೊ ದ ಉತ್ಪನ್ನಗಳು, ಕಾರ್ಯಕ್ರಮಗಳು ಮತ್ತು ಸೇವೆಗಳಿಗೆ ಉಲ್ಲೇಖಗಳನ್ನು ಅಥವಾ ಅಡ್ಡ ಉಲ್ಲೇಖಗಳನ್ನು ಒಳಗೊಂಡಿದೆ. ಆದ್ದರಿಂದ ಈ ಉಲ್ಲೇಖಗಳು ಇಫ್ಕೊ ಟೊಕಿಯೊ ನಿಮ್ಮ ದೇಶದಲ್ಲಿ ಅಂತಹ ಉತ್ಪನ್ನಗಳು, ಕಾರ್ಯಕ್ರಮಗಳು ಅಥವಾ ಸೇವೆಗಳನ್ನು ಘೋಷಿಸಲು ಉದ್ದೇಶಿಸಿದೆ ಎಂದು ಅರ್ಥವಲ್ಲ.ಹೀಗಾದ ಸಂದರ್ಭಗಳಲ್ಲಿ, ಯಾವ ಉತ್ಪನ್ನಗಳು, ಕಾರ್ಯಕ್ರಮಗಳು ಮತ್ತು ಸೇವೆಗಳು ನಿಮಗೆ ಲಭ್ಯವಾಗಬಹುದು/ಲಭ್ಯವಿದೆ ಎಂಬುದರ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ದಯಮಾಡಿ ಇಫ್ಕೊ ಟೊಕಿಯೊ ವನ್ನು ಸಂಪರ್ಕಿಸಿ.

ಹೊಣೆಗಾರಿಕೆಯ ಮಿತಿಗಳು
ಈ ಅಂತರ್ಜಾಲದ ಬಳಕೆಯು ಕೇವಲ ನಿಮ್ಮ ಸ್ವಂತ ನಷ್ಟದಲ್ಲಿದೆ. ಯಾವುದೇ ಸಂದರ್ಭಗಳಲ್ಲಿಯೂ, ಇಫ್ಕೊ ಟೊಕಿಯೊ ಅಥವಾ ಅದರ ಅಂಗಸಂಸ್ಥೆಗಳು ಅಥವಾ ಅದರ ಯಾವುದೇ ಸಂಬಂಧಪಟ್ಟ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಅಥವಾ ಪ್ರತಿನಿಧಿಗಳು ಈ ಅಂತರ್ಜಾಲ ತಾಣದಲ್ಲಿ ಒದಗಿಸಿದ ಯಾವುದೇ ಮಾಹಿತಿಯ ಮೇಲೆ ನಿಮ್ಮ ಅವಲಂಬನೆ ಅಥವಾ ಈ ತಾಣವನ್ನು ಬಳಸಲು ಅಸಮರ್ಥತೆ ಅಥವಾ ಅದರ ಬಳಕೆಗೆ ಸಂಬಂಧಿಸಿದಂತೆ ಅಥವಾ ಅದರಿಂದ ಉಂಟಾಗುವ ನೇರ ಅಥವಾ ಅನಿರ್ದಿಷ್ಟ ನಷ್ಟಗಳು ಅಥವಾ ಹಾನಿಗಳಿಗೆ ಹೊಣೆಗಾರರಲ್ಲ. ನೇರ ಅಥವಾ ಪರೋಕ್ಷ, ಸಾಮಾನ್ಯ, ವಿಶೇಷ, ಸಾಂದರ್ಭಿಕ, ಅನುಕರಣೀಯ ಅಥವಾ ಇಲ್ಲವಾದಲ್ಲಿ, ಮಿತಿಯಿಲ್ಲದ, ದತ್ತಾಂಶದ, ಆದಾಯ ಅಥವಾ ಲಾಭದ ನಷ್ಟವನ್ನು ಒಳಗೊಂಡಂತೆ ಎಲ್ಲ ರೀತಿಯ ನಷ್ಟಗಳು ಮತ್ತು ಹಾನಿಗಳಿಗೆ ಅನ್ವಯಿಸುವ ಹೊಣೆಗಾರಿಕೆಯ ವ್ಯಾಪಕವಾದ ಮಿತಿಯಾಗಿದೆ. ಕರಾರು, ಅಲಕ್ಷ್ಯ, ಅಪಕೃತ್ಯ,ಕಟ್ಟುನಿಟ್ಟಾದ ಹೊಣೆಗಾರಿಕೆ ಅಥವಾ ಇನ್ನಾವುದೇ ಆಧಾರದ ಮೇಲೆ ಹಾಗು ಇಫ್ಕೊ ಟೊಕಿಯೊ ದ ಅಧಿಕೃತ ಪ್ರತಿನಿಧಿಗಳು ಅಥವಾ ಅಂಗಸಂಸ್ಥೆಗಳಿಗೆ ಸಲಹೆ ನೀಡಿದ್ದರೂ ಅಥವಾ ಅಂತಹ ಹಾನಿಯ ಕುರಿತು ತಿಳಿದಿದ್ದರ ಆಧಾರದ ಮೇಲೆ ಆಪಾದಿತ ಹೊಣೆಗಾರಿಕೆಯ ಮೇಲೆ ಹೊಣೆಗಾರಿಕೆಯ ಮಿತಿಯು ಅನ್ವಯವಾಗುತ್ತದೆ.

ಮೇಲ್ಕಂಡಿರುವ ಹೊಣೆಗಾರಿಕೆಯ ಮಿತಿಗಳನ್ನು ಕೆಲವೊಂದು ರಾಜ್ಯವು ಒಪ್ಪುವುದಿಲ್ಲ, ಹಾಗಾಗಿ, ಈ ಹೊಣೆಗಾರಿಕೆಯು ಮಿತಿಯು ನಿಮಗೆ ಅನ್ವಯವಾಗುವುದಿಲ್ಲ. ಈ ಹೊಣೆಗಾರಿಕೆಯ ಮಿತಿಯ ಯಾವುದೇ ಭಾಗವು ಯಾವುದೇ ಕಾರಣಕ್ಕೆ, ಅಸಿಂಧು ಅಥವಾ ಜಾರಿಮಾಡಲಾಗದಿದ್ದರೆ, ಅಂತಹ ಸಂದರ್ಭಗಳಲ್ಲಿ, ಇಲ್ಲವಾದಲ್ಲಿ ಸಾಮಾನ್ಯವಾಗಿ ಸೀಮಿತವಾಗಿರುವ ಹೊಣೆಗಾರಿಕೆಗಳಿಗೆ ಇಫ್ಕೊ ಟೊಕಿಯೊ ದ ಹಾಗು/ಅಥವಾ ಅದರ ಅಂಗಸಂಸ್ಥೆಗಳ ಒಟ್ಟು ಹೊಣೆಗಾರಿಕೆಯು ರೂಪಾಯಿ ಒಂದು ನೂರು (ರೂ.100)ಗಳನ್ನು ದಾಟುವುದಿಲ್ಲ.

ಆಡಳಿತ ಕಾನೂನು ಮತ್ತು ವ್ಯಾಪ್ತಿ
ಈ ಅಂತರ್ಜಾಲ ತಾಣವನ್ನು ಇಫ್ಕೊ ಟೊಕಿಯೊ ತನ್ನ ಭಾರತದೊಳಗಿರುವ ಕಚೇರಿಗಳಿಂದ ನಿಯಂತ್ರಿಸುತ್ತಿದೆ ಹಾಗು ನಿರ್ವಹಿಸುತ್ತಿದೆ. ಈ ಅಂತರ್ಜಾಲ ತಾಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ಲೇಮ್ ಗಳು, ಹಾಗು ಬಳಕೆಯು ಭಾರತೀಯ ಕಾನೂನಿನ ಪರಿವಿಧಿಗೆ ಒಳಪಟ್ಟಿದೆ.

ಸಂಪೂರ್ಣ ಒಪ್ಪಂದ
ಈ ಅಂತರ್ಜಾಲ ತಾಣದ ಪ್ರವೇಶ ಹಾಗು/ಅಥವಾ ಬಳಕೆಗೆ ಸಂಬಂಧಿಸಿದಂತೆ ಈ ಒಪ್ಪಂದವು ನಿಮ್ಮ ಹಾಗು ಇಫ್ಕೊ ಟೊಕಿಯೊ ದ ನಡುವಿನ ಒಪ್ಪಂದವಾಗಿ ರಚಿಸಲ್ಪಡುತ್ತದೆ.


Download Motor Policy

Feedback