Claims

PrintPrintEmail this PageEmail this Page

ವೈಯಕ್ತಿಕ ಅಪಘಾತ ಕ್ಲೇಮ್ ಗಳು

 • ವಿಮೆದಾರರಿಗೆ ತಕ್ಷಣದ ಮಾಹಿತಿ.
 • ಆಕಸ್ಮಿಕ ಸಾವಿನ ಸಂದರ್ಭದಲ್ಲಿ, ವಿಮಾದಾರನ ಕಾನೂನುಬದ್ಧ ನಾಮನಿರ್ದೇಶಿತ / ನಿಯೋಜಕರಿಗೆ ಕ್ಲೇಮ್ ನ ಮೊತ್ತವನ್ನು ಪಾವತಿಸಲಾಗುತ್ತದೆ. ಒಂದು ವೇಳೆ ವಿಮಾದಾರನು ನಾಮನಿರ್ದೇಶಿತರ ಹೆಸರನ್ನು ಒದಗಿಸಲು ವಿಫಲವಾದ ಪಕ್ಷದಲ್ಲಿ , ನ್ಯಾಯಾಲಯದಿಂದ ಅಉತ್ತರಾಧಿಕಾರದ ಪ್ರಮಾಣಪತ್ರ ಅತ್ಯಗತ್ಯ.

ಇತರ ಕ್ಲೇಮ್ ಗಳ ಸಂದರ್ಭದಲ್ಲಿ, ವಿಮೆಗಾರರು ವಿಮೆದಾರನನ್ನು ತಜ್ಞರಿಂದ ಪರೀಕ್ಷೆಗೆ ಗುರಿಪಡಿಸಬಹುದು ಅಥವಾ ಅಗತ್ಯವಿದ್ದಂತೆ ವಿಷಯವನ್ನು ವೈದ್ಯಕೀಯ ಮಂಡಳಿಗೆ ಉಲ್ಲೇಖಿಸಬಹುದು, ಇದರ ವೆಚ್ಚವನ್ನು ವಿಮೆದಾರರಿಂದ ಭರಿಸಲಾಗುವುದು.

ಅಗ್ನಿ/ ಐಎಆರ್ ಪಾಲಿಸಿಗಳ ಅಡಿಯಲ್ಲಿ ಕ್ಲೇಮ್ ಗಳು

 • ಮೊಟ್ಟಮೊದಲಿಗೆ ವಿಮಾದಾರನು ನಷ್ಟವನ್ನು ತಗ್ಗಿಸಲು ಎಲ್ಲಾ ಉಪಯುಕ್ತ ಕ್ರಮಗಳನ್ನು ಕೈಗೊಳ್ಳಬೇಕು.
 • ಅಗ್ನಿಶಾಮಕ ದಳಕ್ಕೆ ತಕ್ಷಣ ಆಹುತಿಯ ಕುರಿತು ತಿಳಿಸುವುದು.
 • ದಂಗೆಕೋರ ಜನಸಮೂಹ, ಕಾರ್ಮಿಕರ ಮುಷ್ಕರ, ಮೂರನೇ ಪಕ್ಷಗಳಿಂದ ದುರುದ್ದೇಶಪೂರಿತ ಹಾನಿ ಅಥವಾ ಭಯೋತ್ಪಾದಕ ಹಾನಿಯಿಂದ ಉಂಟಾಗುವ ಬೆಂಕಿಯ ಸಂದರ್ಭದಲ್ಲಿ ಪೋಲೀಸ್ ದೂರನ್ನು ದಾಖಲಿಸಿ.
 • ವಿಮೆಗಾರರಿಗೆ ಸಾಧ್ಯವಾದಷ್ಟು ಬೇಗ ತಿಳಿಸಿ, ಆದಷ್ಟು 24 ಗಂಟೆಗಳ ಒಳಗಾಗಿ ಇರಬೇಕು.
 • ಸಂಬಂಧಿತ ಮಾಹಿತಿಯ ಮೂಲಕ ವಿಮೆದಾರರಿಂದ ನೇಮಕಗೊಂಡ ಸಮೀಕ್ಷಕರೊಡನೆ ಸಹಕರಿಸುವುದು.
 • ಚಂಡಮಾರುತ, ಪ್ರವಾಹ ಮತ್ತು ಜಲಾವರಣದಿಂದಾಗುವ ನಷ್ಟದ ಸಂದರ್ಭದಲ್ಲಿ ಹವಾಮಾನ ವರದಿಯನ್ನು ಪಡೆದುಕೊಳ್ಳಿ.
 • ಒಂದು ವೇಳೆ ಪಾಲಿಸಿಯು 'ಮರುಸ್ಥಾಪನೆ ಆಧಾರದ ಮೇಲೆ' ಇದ್ದರೆ, ಹಾನಿಗೊಳಗಾದ ವಸ್ತುಗಳ ರಿಪೇರಿ / ಬದಲಾಯಿಸುವಿಕೆಯು ಪೂರ್ಣಗೊಂಡ ನಂತರ ಹಾಗು ಕ್ಲೇಮ್ ಪಾವತಿಗೆ ಬಿಲ್ ಗಳನ್ನು ಸಲ್ಲಿಸಿದಾಗ ಮಾತ್ರವೆ ಕ್ಲೇಮ್ ಅನ್ನು ಪರಿಹರಿಸಲಾಗುತ್ತದೆ.

ದರೋಡೆ ಕ್ಲೇಮ್ ಗಳು / ಹಣ ವಿಮೆ / ವಿಶ್ವಾಸ

 • ಪೊಲೀಸರಿಗೆ ತಕ್ಷಣ ವರದಿ ಮಾಡಿ ಹಾಗು ವಸ್ತುಗಳು ಪುನಃ ಕಂಡುಬಾರದ ಕಾರಣ ಪತ್ತೆಹಚ್ಚಲಾಗದ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.
 • ವಿಮೆದಾರರಿಗೆ ಆದಷ್ಟು ಬೇಗ ಇದರ ಕುರಿತಾಗಿ ಮಾಹಿತಿಯನ್ನು ನೀಡಿ.
 • ಕಳ್ಳತನಕ್ಕೊಳಗಾದ ಆಸ್ತಿಯನ್ನು ಮರುಳಿ ಪಡೆದುಕೊಳ್ಳುವಾಗ ಕ್ಲೇಮ್ ಮೊತ್ತದ ಮರುಪಾವತಿಗಾಗಿ, ವಿಮೆದಾರರು ಸಬ್ರೋಗೇಶನ್ ಪತ್ರವನ್ನು - ಸೂಕ್ತ ಮೌಲ್ಯದ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರವನ್ನು ಪಡೆದುಕೊಳ್ಳುತ್ತಾರೆ.
 • ಪೊಲೀಸರಿಂದ ಅಂತಿಮ ವರದಿಯನ್ನು ಪಡೆದುಕೊಳ್ಳುವುದು.
 • ವಿಮೆದಾರರು ಘಟನೆಯು ನಡೆದ ದಿನದಂದು ನಷ್ಟವನ್ನು ದೃಢೀಕರಿಸುವ ಸಂಪೂರ್ಣ ಪುಸ್ತಕಗಳ ಖಾತೆ ಮತ್ತು ಬಿಲ್ ಗಳನ್ನು ಸಮೀಕ್ಷಕರಿಗೆ ಒದಗಿಸಬೇಕು.

ಯಾಂತ್ರಿಕ ವೈಫಲ್ಯ

 • ವಿಮೆದಾರರಿಗೆ ತಕ್ಷಣದ ಮಾಹಿತಿ.
 • ತಪಾಸಣೆಗೆ ವ್ಯವಸ್ಥೆ ಮಾಡಲು ಕ್ಲೇಮ್ ನ ನೋಟೀಸ್ ಮತ್ತು ಅಂದಾಜು ರಿಪೇರಿ ವೆಚ್ಚವನ್ನು ವಿಮೆದಾರರಿಗೆ ಸಲ್ಲಿಸಬೇಕು.
 • ಭಾಗಶಃ ನಷ್ಟದ ಸಂದರ್ಭದಲ್ಲಿ, ಯಾವುದೇ ಅಪಮೌಲ್ಯ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಆದರೆ ಅಂತಹ ವಸ್ತುಗಳ ಇಂದಿನ ಬದಲಿ ಮೌಲ್ಯಕ್ಕಾಗಿ ಅವುಗಳ ಮೇಲೆ ವಿಮೆ ಮಾಡಲಾಗದಿದ್ದ ಪಕ್ಷದಲ್ಲಿ, ವಸ್ತುಗಳನ್ನು ಒಳಹರಿವಿನಂತೆ ಪರಿಗಣಿಸಲಾಗುತ್ತದೆ ಮತ್ತು ಕ್ಲೇಮ್ ಮೊತ್ತವನ್ನು ಪ್ರಮಾಣಾನುಗುಣವಾಗಿ ಕಡಿತಗೊಳಿಸಲಾಗುತ್ತದೆ. ಒಟ್ಟು ನಷ್ಟದ ಕ್ಲೇಮ್ ಗಳಿಗೆ ಮಾತ್ರ ಅಪಮೌಲ್ಯವನ್ನು ಅನ್ವಯಿಸಲಾಗುತ್ತದೆ.
 • ಒಂದು ವೇಳೆ ಸಾಧನವು ಭಾಗಶಃ ಹಾನಿಗೊಳಗಾದಿದ್ದರೆ, ಅದನ್ನು ಬಳಸಲು ಮುಂಚಿತವಾಗಿ (ವಿಮೆ ಕಂಪೆನಿಯ ಅನುಮೋದನೆಯ ಮೇರೆಗೆ) ಅದನ್ನು ದುರಸ್ತಿ ಮಾಡಬೇಕು, ಇಲ್ಲದಿದ್ದರೆ ನಂತರದ ನಷ್ಟವನ್ನು ಕ್ಲೇಮ್ ಒಳಗೊಂಡಿರುವುದಿಲ್ಲ.

ಎಲೆಕ್ಟ್ರಾನಿಕ್ ಉಪಕರಣಗಳು

 • ವಿಮೆದಾರರಿಗೆ ತಕ್ಷಣದ ಮಾಹಿತಿ.
 • ತಪಾಸಣೆಗೆ ವ್ಯವಸ್ಥೆ ಮಾಡಲು ಕ್ಲೇಮ್ ನ ನೋಟೀಸ್ ಮತ್ತು ಅಂದಾಜು ರಿಪೇರಿ ವೆಚ್ಚವನ್ನು ವಿಮೆದಾರರಿಗೆ ಸಲ್ಲಿಸಬೇಕು.
 • ಭಾಗಶಃ ನಷ್ಟದ ಸಂದರ್ಭದಲ್ಲಿ, ಸೀಮಿತ ಬಾಳಿಕೆಯ ಭಾಗಗಳನ್ನು ಹೊರತುಪಡಿಸಿ ಬದಲಾಯಿಸಿದ ಭಾಗಗಳಿಗೆ ಸಂಬಂಧಿಸಿದಂತೆ ಅಪಮೌಲ್ಯಗಳಿಗೆ ಯಾವುದೇ ಕಡಿತವನ್ನು ಮಾಡಲಾಗುವುದಿಲ್ಲ, ಆದರೆ ಯಾವುದೇ ಬಾಕಿ ಉಳಿದ ಹಾನಿಯಾಗದ ಉಪಕರಣಗಳ (SALVAGE) ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
 • ಒಂದು ವೇಳೆ ಸಾಧನವು ಭಾಗಶಃ ಹಾನಿಗೊಳಗಾದಿದ್ದರೆ, ಅದನ್ನು ಬಳಸಲು ಮುಂಚಿತವಾಗಿ (ವಿಮೆ ಕಂಪೆನಿಯ ಅನುಮೋದನೆಯ ಮೇರೆಗೆ) ಅದನ್ನು ದುರಸ್ತಿ ಮಾಡಬೇಕು, ಇಲ್ಲದಿದ್ದರೆ ನಂತರದ ನಷ್ಟವನ್ನು ಕ್ಲೇಮ್ ಒಳಗೊಂಡಿರುವುದಿಲ್ಲ.

ಸಾಗಣೆಯಲ್ಲಿರುವ ಗೃಹ ವಸ್ತುಗಳು

 • ಸಾಗಣೆಯ ಸಂದರ್ಭದಲ್ಲಿ ಯಾವುದೇ ಹಾನಿಯನ್ನು ಸಂಶಯಿಸಿದರೆ, ವಾಹಕರಿಗೆ ತೆರೆದ ವಿತರಣೆಗಾಗಿ ಒತ್ತಾಯಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಅವರ ಪ್ರಮಾಣಪತ್ರವನ್ನು ಪಡೆಯಬೇಕು.
 • ಸಾಗಾಣಿಕೆಯ ಸಂದರ್ಭದಲ್ಲಿ ನಷ್ಟ / ಹಾನಿ ಸಂಭವಿಸಿದಲ್ಲಿ, ಹಿಂಪಡೆತ ಹಕ್ಕುಗಳನ್ನು ರಕ್ಷಿಸಲು ಸಮಯದ ಮಿತಿಯೊಳಗೆ ವಾಹಕದೊಂದಿಗೆ ಹಣಕಾಸಿನ ಕ್ಲೇಮ್ ಅನ್ನು ಸಲ್ಲಿಸಬೇಕು, ಇದರ ಹೊರತಾಗಿ ಕ್ಲೇಮ್ ಅನ್ನು ಅನುಮತಿಸಲಾಗುವುದಿಲ್ಲ.

ಸಾಗರ ಸಾಗಣೆ ನಷ್ಟ

 • ಮೂಲ ಸರಕುಪಟ್ಟಿ ಮತ್ತು ಪ್ಯಾಕಿಂಗ್ ಪಟ್ಟಿ - ಇನ್ ವಾಯ್ಸ್ ನ ಭಾಗವನ್ನಾಗಿ ಮಾಡುವುದು.
 • ಸಾಗಣೆಯ ಸಂದರ್ಭದಲ್ಲಿ ಯಾವುದೇ ಹಾನಿಯನ್ನು ಸಂಶಯಿಸಿದರೆ, ವಾಹಕರಿಗೆ ತೆರೆದ ವಿತರಣೆಗಾಗಿ ಒತ್ತಾಯಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಅವರ ಪ್ರಮಾಣಪತ್ರವನ್ನು ಪಡೆಯಬೇಕು.
 • ಮೂಲ ಲಾರಿ ರಸೀದಿ (ಎಲ್ಆರ್) / ಬಿಲ್ ಆಫ್ ಲೇಡಿಂಗ್ (ಬಿಎಲ್) - ಸಂಚಾರದಲ್ಲಿ ಹಾನಿಗೊಳಗಾದ ಅಥವಾ ಕಳೆದುಹೋದ ಪ್ರಮಾಣಕ್ಕಾಗಿ ಅರ್ಹ ಟಿಪ್ಪಣಿಗಳೊಂದಿಗೆ.
 • ಘೋಷಣೆಯ ಪಾಲಿಸಿಯ ಸಂದರ್ಭದಲ್ಲಿ - ರವಾನೆಯು ಘೋಷಿಸಲ್ಪಡಬೇಕು ಮತ್ತು ವಿಮೆಗೆ ಒಳಪಟ್ಟಿರುವ ಬಾಕಿ ಉಳಿಕೆಯ ಮೊತ್ತದ ಒಳಗಿರಬೇಕು.
 • ಸಾಗಾಣಿಕೆಯ ಸಂದರ್ಭದಲ್ಲಿ ನಷ್ಟ / ಹಾನಿ ಸಂಭವಿಸಿದಲ್ಲಿ, ಹಿಂಪಡೆತ ಹಕ್ಕುಗಳನ್ನು ರಕ್ಷಿಸಲು ಸಮಯದ ಮಿತಿಯೊಳಗೆ ವಾಹಕದೊಂದಿಗೆ ಹಣಕಾಸಿನ ಕ್ಲೇಮ್ ಅನ್ನು ಸಲ್ಲಿಸಬೇಕು.
 • ವಾಹಕದಿಂದ ಹಾನಿ / ಕೊರತೆ ಪ್ರಮಾಣಪತ್ರ.
 • ನಷ್ಟ / ಹಾನಿಗಳ ವ್ಯಾಪ್ತಿ, ಕಾರಣ ಮತ್ತು ಸ್ವರೂಪವನ್ನು ನಿರ್ಧರಿಸಲು ಸಮೀಕ್ಷಕರನ್ನು (ವಿಮೆಗಾರರಿಂದ ಪರಸ್ಪರ ಒಪ್ಪಿಗೆ ಪಡೆದು) ನೇಮಕ ಮಾಡಬೇಕು.

Download Motor Policy

Feedback