Claims

PrintPrintEmail this PageEmail this Page

ನೀವು ಆರೋಗ್ಯ ವಿಮೆಗಳಿಗೆ ಎರಡು ರೀತಿಯಲ್ಲಿ ಕ್ಲೇಮ್ ಗಳನ್ನು ಸಲ್ಲಿಸಬಹುದಾಗಿದೆ: ನೀವು ಒಂದಾ ನಗದುರಹಿತ ಕ್ಲೇಮ್ ಗಳನ್ನು ಆಯ್ದುಕೊಳ್ಳಬಹುದು ಅಥವಾ ನಿಮ್ಮ ಕ್ಲೇಮ್ ನ ಮರುಪಾವತಿಗೆ ಮೊರೆಹೋಗಬಹುದು. ಅನುಸರಿಸಬೇಕಾದ ಕಾರ್ಯವಿಧಾನಗಳು ಈ ಕೆಳಕಂಡಂತಿದೆ:

ನಗದುರಹಿತ ಕ್ಲೇಮ್ ನ ಸೌಲಭ್ಯವು ಕೇವಲ ನಮ್ಮ ಸಹಯೋಗದಲ್ಲಿರುವ TPA ಜಾಲಬಂಧದ ಆಸ್ಪತ್ರೆಗಳೊಂದಿಗೆ ಮಾತ್ರ ಲಭ್ಯವಿದೆ. ಯಾವುದೇ ನಿರ್ದಿಷ್ಟ ಆಸ್ಪತ್ರೆಯ ಜಾಲಬಂಧದ ಪ್ರಸ್ತುತ ಸ್ಥಿತಿಯ ಕುರಿತು, ನೀವು ಆಸ್ಪತ್ರೆಗೆ ದಾಖಲಾಗುವ ಮೊದಲು ನಮ್ಮ TPA ನಿಂದ ಅರ್ಥಮಾಡಿಕೊಳ್ಳಲು ನಿಮಗೆ ಸೂಚಿಸಲಾಗಿದೆ.

ಈ ಸೌಲಭ್ಯದಡಿಯಲ್ಲಿ, ಜಾಲಬಂಧದ ಆಸ್ಪತ್ರೆಯು ನಗದುರಹಿತ ವಿನಂತಿಗೆ ಸಂಬಂಧಿಸಿದಂತೆ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.ಅಲ್ಲದೆ, ನಿಮ್ಮ ಆರೋಗ್ಯ ಕಾರ್ಡ್ ಮೇಲೆ ನೀಡಲಾದ ನಿಮ್ಮ ಸದಸ್ಯತ್ವ ಸಂಖ್ಯೆಯನ್ನು ಉಲ್ಲೇಖದೊಂದಿಗೆ, ನೀವು ನಮ್ಮ ಮೂರನೇ ಪಕ್ಷದ ಆಡಳಿತಕಾರರನ್ನು ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

ನಗದುರಹಿತ ಕ್ಲೇಮ್ ಗಳು ಎರಡು ರೀತಿಯಲ್ಲಿದೆ:

  • ತುರ್ತು ಪ್ರವೇಶಾತಿಗಳಿಗೆ ನಗದುರಹಿತ ಕ್ಲೇಮ್ ಗಳ ವಿಧಾನ
  • ಯೋಜಿಸಲಾದ ಪ್ರವೇಶಾತಿಗಳಿಗೆ ನಗದುರಹಿತ ಕ್ಲೇಮ್ ಗಳ ವಿಧಾನ

ತುರ್ತು ಪ್ರವೇಶಾತಿಗಳಿಗೆ ನಗದುರಹಿತ ಕ್ಲೇಮ್ ಗಳ ವಿಧಾನ:

  • ಹಂತ 1: ಜಾಲಬಂಧದ ಆಸ್ಪತ್ರೆಯಾಗಿದ್ದಲ್ಲಿ, ಪ್ರವೇಶಾತಿಯ ವೇಳೆಯಲ್ಲಿ, ಮೂರನೇ ಪಕ್ಷದ ಆಡಳಿತಕಾರರನ್ನು (TPA) ಟೋಲ್ ಫ್ರೀ ಸಂಖ್ಯೆಗೆ ಕರೆಮಾಡುವ ಮೂಲಕ ಅವರಿಗೆ ಸಂದಭವನ್ನು ತಿಳಿಸಿ. ಅಲ್ಲದೆ, ದಯಮಾಡಿ ನಿಮ್ಮ ಆರೋಗ್ಯ ಕಾರ್ಡ್ ಸದಸ್ಯತ್ವ ಸಂಖ್ಯೆಯನ್ನು ಕೂಡ ಉಲ್ಲೇಖಿಸಿ.
  • ಹಂತ 2: ಆಸ್ಪತ್ರೆಯ ವಿಮಾ ಸಹಾಯ ಕೇಂದ್ರದಲ್ಲಿ ಲಭ್ಯವಿರುವ ನಗದುರಹಿತ ವಿನಂತಿ ನಮೂನೆಯನ್ನು ತುಂಬಿಸಿ ಹಾಗು ಅದನ್ನು ನಿಮ್ಮ ಚಿಕಿತ್ಸಕ ವೈದ್ಯರಿಂದ ಪ್ರಮಾಣೀಕರಿಸಿಕೊಳ್ಳಿ
  • ಹಂತ 3: ನಗದುರಹಿತ ವಿನಂತಿ ನಮೂನೆಯನ್ನು ಆಧಾರಿತ ವೈದ್ಯಕೀಯ ದಾಖಲೆಗಳೊಂದಿಗೆ TPA ಗೆ ಫ್ಯಾಕ್ಸ್ ಮಾಡಿ.
  • ಹಂತ 4: TPA ರವರು ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಅವರ ತೀರ್ಮಾನವನ್ನು ಆಸ್ಪತ್ರೆಗೆ ತಿಳಿಸುತ್ತಾರೆ. TPA ರವರು ನಗದುರಹಿತ ವಿನಂತಿಯನ್ನು ಪುರಸ್ಕರಿಸಬಹುದು ಅಥವಾ ಅಗತ್ಯವಿದ್ದಲ್ಲಿ, ಹೆಚ್ಚಿನ ದಾಖಲೆಗಳಿಗಾಗಿ ಕರೆ ಅಥವಾ ವಿನಂತಿಸಬಹುದು.
  • ಹಂತ 5: TPA ರವರಿಂದ ನಗದುರಹಿತ ಕ್ಲೇಮ್ ನ ಪುರಸ್ಕಾರದೊಂದಿಗೆ, ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೇರವಾಗಿ ಇತ್ಯರ್ಥಗೊಳಿಸಲಾಗುತ್ತದೆ (ಪಾಲಿಸಿಯ ಮಿತಿಗಳಿಗೆ ಒಳಪಟ್ಟಿರುತ್ತದೆ). ಟೆಲಿಫೋನ್ ಶುಲ್ಕಗಳು, ಆಹಾರ, ಅಟೆಂಡೆಂಟ್ ಶುಲ್ಕಗಳು ಹಾಗು ಇನ್ನಿತರೇ ಆಕ್ಷೇಪಾರ್ಹ ಖರ್ಚುಗಳನ್ನು ನೀವು ಪಾವತಿಸಬೇಕಾಗುತ್ತದೆ.
  • ಹಂತ 6: ಒಂದು ಪಕ್ಷದಲ್ಲಿ ನಗದುರಹಿತ ಕ್ಲೇಮ್ ನನ್ನು TPA ರವರು ಒಪ್ಪದಿದ್ದ ಸಂದರ್ಭದಲ್ಲಿ, ದಯಮಾಡಿ ಆಸ್ಪತ್ರೆಯ ಬಿಲ್ ಅನ್ನು ಇತ್ಯರ್ಥಗೊಳಿಸಿ ಅದರ ಮರುಪಾವತಿಗಾಗಿ ಅರ್ಜಿ ಸಲ್ಲಿಸಿ. ಕ್ಲೇಮ್ ಅನ್ನು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಅನ್ವಯ ಸಂಸ್ಕರಿಸಲಾಗುತ್ತದೆ.

ನಮ್ಮ TPA ಮೂಲಕ ನಗದುರಹಿತ ನಿರ್ಧಾರವನ್ನು ಅನುಮೋದಿಸಲು ಟರ್ನ್ಆರೌಂಡ್ ಸಮಯವು ಎಲ್ಲಾ ದಾಖಲೆಗಳ ಸ್ವೀಕೃತಿಯಾದ 24 ಗಂಟೆಗಳ ಒಳಗಿರುತ್ತದೆ.

ಯೋಜಿಸಲಾದ ಪ್ರವೇಶಾತಿಗಳಿಗೆ ನಗದುರಹಿತ ಕ್ಲೇಮ್ ಗಳ ವಿಧಾನ

  • ಹಂತ 1:  ಚಿಕಿತ್ಸೆಗಾಗಿ ನಮ್ಮ ಜಾಲಬಂಧದ ಪಟ್ಟಿಯಲ್ಲಿರುವ ಆಸ್ಪತ್ರೆಗಳ ಪೈಕಿ ಒಂದನ್ನು ಆಯ್ದುಕೊಳ್ಳಿ. 
  • ಹಂತ 2: ಆಸ್ಪತ್ರಗೆ ದಾಖಲಾಗುವ ಮೂರು ದಿನಗಳ ಮುಂಚಿತವಾಗಿ ಮೂರನೇ ವ್ಯಕ್ತಿಯ ಆಡಳಿತಕಾರರನ್ನು (TPA) ಸಹಾಯವಾಣಿಗೆ ಕರೆಮಾಡುವ ಮೂಲಕ ನಿಮ್ಮ ಆರೋಗ್ಯ ಕಾರ್ಡ್ ಸದಸ್ಯತ್ವ ಸಂಖ್ಯೆಯನ್ನು ಉಲ್ಲೇಖಿಸುವುದರೊಂದಿಗೆ ಅವರಿಗೆ ದಾಖಲಾತಿಯ ವಿಷಯವನ್ನು ಮುಟ್ಟಿಸಿ.
  • ಹಂತ 3: ಆಸ್ಪತ್ರೆಯ ವಿಮಾ ಸಹಾಯ ಕೇಂದ್ರದಲ್ಲಿ ಲಭ್ಯವಿರುವ ನಗದುರಹಿತ ವಿನಂತಿ ನಮೂನೆಯನ್ನು ತುಂಬಿಸಿ ಹಾಗು ಅದನ್ನು ನಿಮ್ಮ ಚಿಕಿತ್ಸಕ ವೈದ್ಯರಿಂದ ಪ್ರಮಾಣೀಕರಿಸಿಕೊಳ್ಳಿ.
  • ಹಂತ 4: ನಗದುರಹಿತ ವಿನಂತಿ ನಮೂನೆಯನ್ನು ಆಧಾರಿತ ವೈದ್ಯಕೀಯ ದಾಖಲೆಗಳೊಂದಿಗೆ TPA ಗೆ ಫ್ಯಾಕ್ಸ್ ಮಾಡಿ.
  • ಹಂತ 5: TPA ರವರು ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಅವರ ತೀರ್ಮಾನವನ್ನು ಆಸ್ಪತ್ರೆಗೆ ತಿಳಿಸುತ್ತಾರೆ. TPA ರವರು ನಗದುರಹಿತ ವಿನಂತಿಯನ್ನು ಪುರಸ್ಕರಿಸಬಹುದು ಅಥವಾ ಅಗತ್ಯವಿದ್ದಲ್ಲಿ, ಹೆಚ್ಚಿನ ದಾಖಲೆಗಳಿಗಾಗಿ ಕರೆ ಅಥವಾ ವಿನಂತಿಸಬಹುದು.
  • ಹಂತ 6: TPA ರವರಿಂದ ನಗದುರಹಿತ ಕ್ಲೇಮ್ ನ ಪುರಸ್ಕಾರದೊಂದಿಗೆ, ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೇರವಾಗಿ ಇತ್ಯರ್ಥಗೊಳಿಸಲಾಗುತ್ತದೆ (ಪಾಲಿಸಿಯ ಮಿತಿಗಳಿಗೆ ಒಳಪಟ್ಟಿರುತ್ತದೆ). ಟೆಲಿಫೋನ್ ಶುಲ್ಕಗಳು, ಆಹಾರ, ಅಟೆಂಡೆಂಟ್ ಶುಲ್ಕಗಳು ಹಾಗು ಇನ್ನಿತರೇ ಆಕ್ಷೇಪಾರ್ಹ ಖರ್ಚುಗಳನ್ನು ನೀವು ಪಾವತಿಸಬೇಕಾಗುತ್ತದೆ.
  • ಹಂತ 7: ಒಂದು ಪಕ್ಷದಲ್ಲಿ ನಗದುರಹಿತ ಕ್ಲೇಮ್ ನನ್ನು TPA ರವರು ಒಪ್ಪದಿದ್ದ ಸಂದರ್ಭದಲ್ಲಿ, ದಯಮಾಡಿ ಆಸ್ಪತ್ರೆಯ ಬಿಲ್ ಅನ್ನು ಇತ್ಯರ್ಥಗೊಳಿಸಿ ಅದರ ಮರುಪಾವತಿಗಾಗಿ ಅರ್ಜಿ ಸಲ್ಲಿಸಿ. ಕ್ಲೇಮ್ ಅನ್ನು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಅನ್ವಯ ಸಂಸ್ಕರಿಸಲಾಗುತ್ತದೆ.

ನಮ್ಮ TPA ಮೂಲಕ ನಗದುರಹಿತ ನಿರ್ಧಾರವನ್ನು ಅನುಮೋದಿಸಲು ಟರ್ನ್ಆರೌಂಡ್ ಸಮಯವು ಎಲ್ಲಾ ದಾಖಲೆಗಳ ಸ್ವೀಕೃತಿಯಾದ 24 ಗಂಟೆಗಳ ಒಳಗಿರುತ್ತದೆ.

ಕ್ಲೇಮ್ ನ ಮರುಪಾವತಿಗಾಗಿ ಅನುಸರಿಸಬೇಕಾದ ವಿಧಾನ

ಜಾಲಬಂಧದ ಆಸ್ಪತ್ರೆಯಲ್ಲಿ ಒಂದು ವೇಳೆ ನೀವು ನಗದುರಹಿತ ಸೌಲಭ್ಯವನ್ನು ಆಯ್ದುಕೊಳ್ಳದಿದ್ದರೆ ಅಥವಾ ಜಾಲಬಂಧದಲ್ಲಿರದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರೆ, ಕ್ಲೇಮ್ ನ ಮರುಪಾವತಿಗಾಗಿ ನಿಮ್ಮ ಮೂಲ ದಾಖಲೆಗಳನ್ನು ಸಲ್ಲಿಸಬೇಕು.

  • ಹಂತ 1: ಬಿಡುಗಡೆಯ ಏಳು ದಿನಗಳ ಒಳಗಾಗಿ ಟೋಲ್ ಫ್ರೀ ಸಂಖ್ಯೆ 1800 103 5499 ಗೆ ಕರೆಮಾಡುವ ಮೂಲಕ IFFCO TOKIO ಗೆ ತಕ್ಷಣ ದಾಖಲಾತಿಯ ಕುರಿತು ಮಾಹಿತಿಯನ್ನು ನೀಡಿ. ಕ್ಲೇಮ್ ಅನ್ನು ತಿಳಿಸುವ ಸಂದರ್ಭದಲ್ಲಿ ದಯಮಾಡಿ ನಿಮ್ಮ ಪಾಲಿಸಿ ಪ್ರಮಾಣಪತ್ರ ಸಂಖ್ಯೆಯನ್ನು ಉಲ್ಲೇಖಿಸಿ.
  • ಹಂತ 2: ಚಿಕಿತ್ಸೆಯನ್ನು ಪಡೆದುಕೊಳ್ಳಿ ಮತ್ತು ಎಲ್ಲಾ ಬಿಲ್ ಗಳನ್ನು ಆಸ್ಪತ್ರೆಯೊಂದಿಗೆ ಇತ್ಯರ್ಥಗೊಳಿಸಿದ ನಂತರ ಮರುಪಾವತಿಗಾಗಿ ಕ್ಲೇಮ್ ಅನ್ನು ಸಲ್ಲಿಸಿ.
  • ಹಂತ 3: ಸಂಬಂಧಿತ ಕ್ಲೇಮ್ ನಮೂನೆಯನ್ನು ನಮ್ಮ ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿ (ಅಥವಾ) ನಮ್ಮ ಕಾಲ್ ಸೆಂಟರ್ ಗೆ ಕರೆ ಮಾಡುವ ಮೂಲಕ ನಮೂನೆಗೆ ವಿನಂತಿಸಿ.

ಕ್ಲೇಮ್ ದಾಖಲೆಗಳನ್ನು ಸ್ಥಳೀಯ IFFCO TOKIO ಕಚೇರಿ ವಿಳಾಸಕ್ಕೆ ಕೂಡ ಸಲ್ಲಿಸಬಹುದು, ಈ ವಿಳಾಸಗಳನ್ನು ಟೋಲ್ ಸಂಖ್ಯೆ 1800 543 5499 ಗೆ ಕರೆಮಾಡುವ ಮೂಲಕ ಕೂಡ ಪಡೆದುಕೊಳ್ಳಬಹುದು.

ಒಂದು ವೇಳೆ ನಿಮಗೆ ಕ್ಲೇಮ್ ಪ್ರಕ್ರಿಯೆಯ ಕುರಿತು ಮಾರ್ಗದರ್ಶನ ಅಗತ್ಯವಿದ್ದರೆ, ನಮ್ಮ ಟೋಲ್ ಸಂಖ್ಯೆ - 1800 543 5499ಗೆ ಕರೆಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು.

ದಾಖಲೆಗಳ ಪರಿಶೀಲನಾಪಟ್ಟಿ

ಕ್ಲೇಮ್ ನ ಮರುಪಾವತಿಯ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು - ವೈದ್ಯರ ಪ್ರಮಾಣಪತ್ರದೊಂದಿಗೆ ಸರಿಯಾಗಿ ತುಂಬಿದ ಕ್ಲೇಮ್ ನ ನಮೂನೆ.

  • ಬಿಡುಗಡೆ ಸಾರಾಂಶ
  • ಬಿಲ್ ಗಳು
  • ಔಷಧಿ ಪತ್ರ
  • ಅಡ್ವಾನ್ಸ್ ಮತ್ತು ಅಂತಿಮ ರಸೀದಿಗಳು
  • ಡಯಾಗ್ನೋಸ್ಟಿಕ್ ಪರೀಕ್ಷೆ ವರದಿಗಳು, ಎಕ್ಸ್ ರೇ, ಸ್ಕ್ಯಾನ್ ಮತ್ತು ಇಸಿಜಿ ಮತ್ತು ಇತರ ಫಿಲಂ ಗಳು

ಅಗತ್ಯವಿದ್ದಲ್ಲಿ, ಕ್ಲೇಮ್ ಸಂಸ್ಕರಣಾ ತಂಡವು ಮೇಲೆ ಪಟ್ಟಿ ಮಾಡಿರುವ ದಾಖಲೆಗಳಿಗಿಂತ ಹೆಚ್ಚಿನ ದಾಖಲೆಗಳನ್ನು ಕೇಳಬಹುದು.

ದಯಮಾಡಿ ಗಮನಿಸಿ:

  • ಅಗತ್ಯವಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆದನಂತರ ಕ್ಲೇಮ್ ಅನ್ನು ಸಂಸ್ಕರಿಸಲಾಗುವುದು ಹಾಗು ಅಗತ್ಯವಿದ್ದಲ್ಲಿ, ಯಾವುದೇ ಹೆಚ್ಚುವರಿ ದಾಖಲೆಗಳು/ಮಾಹಿತಿಗಳನ್ನು ಸಂಸ್ಕರಣೆಯ ನಂತರ ಕೇಳಬಹುದಾಗಿದೆ.
  • ಕ್ಲೇಮ್ ಸ್ವೀಕಾರಾರ್ಹವಾದುದಾದರೆ ಚೆಕ್ ಅನ್ನು ನಿಮಗೆ ಕಳುಹಿಸಲಾಗುವುದು. ಒಂದು ವೇಳೆ ಆಗದಿದ್ದ ಪಕ್ಷದಲ್ಲಿ, ಒಂದು ನಿರಾಕರಣ ಪತ್ರವನ್ನು ನಿಮಗೆ ಕಳುಹಿಸಲಾಗುತ್ತದೆ.
  • ಎಲ್ಲಾ ದಾಖಲೆಗಳು ಸ್ವೀಕಾರಗೊಂಡ 20 ದಿನಗಳು ಕ್ಲೇಮ್ ನ ಮರುಪಾವತಿಗೆ ಟರ್ನ್ ಅರೌಂಡ್ ಸಮಯವಾಗಿದೆ.

ಕ್ಲೇಮ್ ನ ಪಾವತಿ

  • ಈ ಪಾಲಿಸಿಯಡಿಯಲ್ಲಿನ ಎಲ್ಲಾ ಕ್ಲೇಮ್ ಗಳನ್ನು ಭಾರತೀಯ ಕರೆನ್ಸಿಯಲ್ಲಿ ಮಾತ್ರ ಪಾವತಿಸಲಾಗುತ್ತದೆ. ಈ ವಿಮಾ ಉದ್ದೇಶಕ್ಕಾಗಿ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳನ್ನು ಭಾರತದಲ್ಲಿ ಮಾತ್ರ ತೆಗೆದುಕೊಳ್ಳಬೇಕಾಗುತ್ತದೆ.
  • IRDA ನಿಯಮಗಳ ಅಡಿಯಲ್ಲಿ ಒದಗಿಸಿದ ನಿಯಮಗಳ ಹೊರತುಪಡಿಸಿ IFFCO TOKIO ಪಾಲಿಸಿಯ ಅಡಿಯಲ್ಲಿ ಪಾವತಿಸಿದ ಅಥವಾ ಪಾವತಿಸಬೇಕಾದ ಮೊತ್ತಕ್ಕೆ ಯಾವುದೇ ಬಡ್ಡಿ/ದಂಡವನ್ನು ಪಾವತಿಸಲು ಜವಾಬ್ದಾರವಾಗಿರುವುದಿಲ್ಲ.
  • ಕ್ಲೇಮ್ ಸ್ವೀಕಾರಾರ್ಹವಾದರೆ, ಒಂದು ವೇಳೆ ಪ್ರಸ್ತಾಪಕರು ಕ್ಲೇಮ್ ನ ಸಮಯದಲ್ಲಿ ಜೀವಂತವಿಲ್ಲವಾದರೆ ಪ್ರಸ್ತಾಪಕರ ಕಾನೂನು ಉತ್ತರಾಧಿಕಾರಿಗೆ ಪಾವತಿಸಲಾಗುವುದು.

Download Motor Policy

Feedback