PrintPrintEmail this PageEmail this Page

Get the Answers to all your Claims related Questions you might have for us

FAQs

IDV ಪದದ ಸಂಕ್ಷಿಪ್ತ ರೂಪ "ಇನ್ಸೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ" ಅಂದರೆ, ವಿಮಾದಾರನ ಘೋಷಿತ ಮೌಲ್ಯ ಎಂದರ್ಥ. ಇದನ್ನು ವಾಹನದ ವಿಮಾ ಮೊತ್ತ ಎಂದು ಪರಿಗಣಿಸಲಾಗುತ್ತದೆ. ವಾಹನದ IDV ಯನ್ನು ವಾಹನದ ಬ್ರಾಂಡ್ ಮತ್ತು ಮಾದರಿಯ ಮೇಲೆ ತಯಾರಕರು ಪಟ್ಟಿ ಮಾಡಿರುವ ಬೆಲೆಗೆ ವಾಹನದ ಆಯಸ್ಸಿನೊಂದಿಗೆ ಸವಕಳಿ ತೆಗೆದು ಮಾಡುವುದರ ಆಧಾರದ ಮೇಲೆ ನಿಶ್ಚಯಿಸಲಾಗುತ್ತದೆ.

ಕಾರಿನ ವಿಮಾ ಪಾಲಿಸಿಯ ಅವಧಿಯಲ್ಲಿ ತಮ್ಮ ಪಾಲಿಸಿಯ ಮೇಲೆ ಕ್ಲೇಮ್ ಮಾಡದಿರುವ ಪಾಲಿಸಿದಾರರಿಗೆ ವಿಮಾದಾರರಿಂದ ನೀಡಲ್ಪಡುವ ರಿಯಾಯಿತಿಯನ್ನು ನೋ ಕ್ಲೇಮ್ ಬೋನಸ್ ಎಂದು ಕರೆಯುವರು. ಸಾಮಾನ್ಯವಾಗಿ ಇದು ಕಾರು ವಿಮೆಯ ಉಚಿತ ಪಾಲಿಸಿಯ ಅವಧಿಯಲ್ಲಿ 20% ನಷ್ಟು ರಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ 50% ವರೆಗೆ ಮುಟ್ಟಬಹುದು.

ಲೋಡಿಂಗ್ ಒಂದು ಹೆಚ್ಚುವರಿ ಪ್ರೀಮಿಯಂ ಆಗಿದೆ, ಇದನ್ನು ಪಾಲಿಸಿಯ ಅವಧಿಯ ಸಮಯದಲ್ಲಿ ಕ್ಲೇಮ್ ಅನುಭವವು ವ್ಯತಿರಿಕ್ತವಾಗಿದ್ದರೆ ವಿಮಾ ಪಾಲಿಸಿ ನವೀಕರಣದ ಸಮಯದಲ್ಲಿ ಪಾವತಿಸಲಾಗುತ್ತದೆ.

ಆಟೋಮೊಬೈಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಉಪಕರಣವು ಮತ್ತು ಆಟೊಮೊಬೈಲ್ ಅಸೋಸಿಯೇಷನ್ಸ್ ನಿಂದ ಅದರ ಅನುಷ್ಠಾನವು ಅನುಮೋದನೆಗೊಂಡಿದ್ದಾರೆ ನಿಮ್ಮ ವಾಹನದಲ್ಲಿ ಅಂತಹ ಕಳ್ಳತನ ಮುನ್ನೆಚ್ಚರಿಕೆ ಸಾಧನವನ್ನು ಅಳವಡಿಸಿದರೆ ಅಂತಹ ಸಂದರ್ಭದಲ್ಲಿ ನಿಮಗೆ ರಿಯಾಯಿತಿ ಲಭ್ಯವಿದೆ.

ಕ್ಲೇಮ್ ಅನ್ನು ಪಡೆದ ಪಕ್ಷದಲ್ಲಿ ಯಾವುದೇ ಹೆಚ್ಚುವರಿ ಪ್ರೀಮಿಯಂನನ್ನು ಪಾವತಿಸುವ ಅಗತ್ಯವಿರುವುದಿಲ್ಲ ಆದರೆ ಕ್ಲೇಮ್ ಅನುಭವವು ವ್ಯತಿರಿಕ್ತವಾಗಿದ್ದರೆ ಕಂಪೆನಿಯ ಪಾಲಿಸಿಯ ಅನುಗುಣ ಕೆಲವು ಲೋಡಿಂಗ್ ನನ್ನು ವಿಧಿಸುವ ಸಾಧ್ಯತೆಗಳಿರುತ್ತವೆ. ನೀವು ಒಂದು ವೇಳೆ ಪಾಲಿಸಿಯ ಮೇಲೆ ನೋ ಕ್ಲೇಮ್ ಇದ್ದ ಸಂದಭದಲ್ಲಿ ಅನುಭವಿಸಬಹುದಾಗಿದ್ದ ನಿಮ್ಮ ನೋ ಕ್ಲೇಮ್ ಬೋನಸ್ ನನ್ನು ಮಾತ್ರ ಕಳೆದುಕೊಳ್ಳುತ್ತೀರ.

SALVAGE ಎಂದರೆ ವಾಹನವು ಅಪಘಾತವನ್ನು ಸಂಧಿಸಿದ ನಂತರ ಉಂಟಾದ ನಷ್ಟದಲ್ಲಿಉಳಿದ ಧ್ವಂಸದ ಮೌಲ್ಯವಾಗಿದೆ, ಹಾಗಾದಾಗ ವಾಹನವನ್ನು ಪುನಃ ಅದರ ಆರಂಭಿಕ ಸ್ಥಿತಿಗೆ ತರುವುದು ಸಾಧ್ಯವಿರುವುದಿಲ್ಲ.

ನಿರ್ದಿಷ್ಟವಾದ ಹೊರತುಪಡಿಸುವುದು

  • ಕಾರ್ಯಾಚರಣೆಯ ಭೌಗೋಳಿಕ ಪ್ರದೇಶದ ಹೊರಗಿನ ಯಾವುದೇ ಅಪಘಾತ
  • ತತ್ಫಲವಾದ ನಷ್ಟ, ಸಾಮಾನ್ಯ ಕಡಿತ ಮತ್ತು ಸವೆತ
  • ನಿರ್ದಿಷ್ಟ ವರ್ಗದ ವಾಹನವನ್ನು ಅದರ ಮಾನ್ಯವಾದ ಪರವಾನಗಿ ಇಲ್ಲದೆ ಚಲಾಯಿಸುವುದು
  • ಮದ್ಯ / ಮಾದಕ ವಸ್ತುಗಳ ಪ್ರಭಾವದ ಅಡಿಯಲ್ಲಿ ಚಲಾಯಿಸುವುದು
  • ವಾಹನವನ್ನು ಅದರ ಬಳಕೆಯ ಮಿತಿಯೊಂದಿಗೆ ಬಳಸದಿರುವುದು
  • ನಿರ್ದಿಷ್ಟ ಪ್ರತ್ಯೇಕಗಳ ಅಡಿಯ ವ್ಯಾಪ್ತಿಗೆ ಬರುವ ಯಾಂತ್ರಿಕ ಅಥವಾ ವಿದ್ಯುತ್ ಸ್ಥಗಿತ, ವೈಫಲ್ಯ ಮುಂತಾದವುಗಳು
  • ಮನಃಪೂರ್ವಕ ಹಾನಿ, ಬಾಡಿಗೆ ಮತ್ತು ಬಹುಮಾನ
  • ವಾಹನವು ಕಳುವಾಗಿದ್ದರೆ ಅಥವಾ ಒಂದೇ ಸಮಯದಲ್ಲಿ ವಾಹನಗಳು ಹಾನಿಗೊಳಗಾಗದಿದ್ದ ಸಂದರ್ಭದ ಹೊರತಾಗಿ ಟೈರುಗಳು ಮತ್ತು ಟ್ಯೂಬ್ ಗಳಿಗಿನ ಹಾನಿ

ಸಾಮಾನ್ಯ ಹೊರತುಪಡಿಸುವುದು

  • ವಿಕಿರಣಶೀಲ ಮಾಲಿನ್ಯ, ಪರಮಾಣು ವಿದಳನ, ಯುದ್ಧದ ಆಕ್ರಮಣ.

ಕೆಳಗಿನ ಷರತ್ತುಗಳ ಸಂದರ್ಭದಲ್ಲಿ ನೀವು ಕ್ಲೇಮ್ಅನ್ನು ಮಾಡಬಹುದು:

  • ಆ ವಾಹನಕ್ಕೆ ವಿಮಾ ಪಾಲಿಸಿಯು ಅಸ್ತಿತ್ವದಲ್ಲಿರಬೇಕು,
  • ನೀವು ಪಾವತಿಸಿದ ಚಾಲಕನಿಗಾಗಿ ಪ್ರೀಮಿಯಂ ಅನ್ನು ಪಾವತಿಸಿದ್ದರೆ ಅಥವಾ ಕಾರನ್ನು ನಿಮ್ಮ ಅನುಮತಿಯ ಮೇರೆಗೆ ಚಲಾಯಿಸಿದ್ದಾರೆ ಅದನ್ನು ಪಾವತಿಸಬೇಕಾಗುತ್ತದೆ.
  • ಕಾರನ್ನು ಚಾಲನೆ ಮಾಡುವ ವ್ಯಕ್ತಿಯ ಬಳಿ ಸಮುಚಿತವಾದ ಪರವಾನಗಿ ಇದ್ದಲ್ಲಿ, ಏಕೆಂದರೆ ಚಾಲಕನ ಸೀಟಿನಲ್ಲಿರುವ ವ್ಯಕ್ತಿಯನ್ನು ಒಳಗೊಂಡಂತೆ ಆಸನ ಸಾಮರ್ಥ್ಯವನ್ನು ಆಧರಿಸಿ ಪ್ರೀಮಿಯಂ ತೆಗೆದುಕೊಳ್ಳಲಾಗುತ್ತದೆ.

ಹಾನಿ ಚಿಕ್ಕದಾಗಿದ್ದರೂ, ಕ್ಲೇಮ್ ನನ್ನು ಯಾವಾಗಲೂ ಮಾಡುವ ಅಗತ್ಯವಿರುವುದಿಲ್ಲ. ವಾಸ್ತವವಾಗಿ, ಸಣ್ಣ ಹಾನಿಗಳಿಗೆ ಕ್ಲೇಮ್ ಅನ್ನು ಮಾಡುವುದು ಸೂಕ್ತವಲ್ಲ, ಏಕೆಂದರೆ ನೀವು ಅಪಮೌಲ್ಯದ ಶುಲ್ಕ ಮಾತ್ರವಲ್ಲದೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ ಮತ್ತು ಇದು ನಿಮ್ಮ ಕ್ಲೇಮ್ ಮೊತ್ತವನ್ನು ಇನ್ನು ಸಣ್ಣ ಮೊತ್ತಕ್ಕೆ ಇಳಿಸುವ ಅಪಾಯವಿರುತ್ತದೆ, ಅಲ್ಲದೆ ನೀವು ನವೀಕರಣ ಸಮಯದಲ್ಲಿ ನೋ ಕ್ಲೇಮ್ ಬೋನಸ್ (ಯಾವುದಾದರೂ ಇದ್ದಾರೆ) ಅನ್ನು ಕೂಡ ಕಳೆದುಕೊಳ್ಳಬಹುದಾದ ಸನ್ನಿವೇಶವನ್ನು ಎದುರಿಸಬಹುದು. ಹಾಗಾಗಿಯೂ, ನೀವು ಒಮ್ಮೆ ಕ್ಲೇಮ್ ಅನ್ನು ಪಡೆಯಲು ನಿರಾಕರಿಸಿದ ಪಕ್ಷದಲ್ಲಿ, ನೀವು ನಂತರದ ಹಂತಗಳಲ್ಲಿ ಈ ಕ್ಲೇಮ್ ಗಳನ್ನು ಪಡೆಯಲು ಸಾಧ್ಯವಿಲ್ಲ.

ಗಾಳಿರಕ್ಷಾ ಕವಚಕ್ಕೆ ನೀವು ಪೂರ್ಣ ಮರುಪಾವತಿಯನ್ನು ಪಡೆಯುತ್ತೀರಿ. ಆದಾಗ್ಯೂ, ರಬ್ಬರ್ ಲೈನಿಂಗ್ ಮತ್ತು ಸೀಲಂಟ್ ನ ಮೇಲೆ ಶೇಕಡಾ 50% ನಷ್ಟು ಅಪಮೌಲ್ಯವಿರುತ್ತದೆ. ಹೆಚ್ಚುವರಿಯಾಗಿ, ನೀವು ಪಾಲಿಸಿಯ ಹೆಚ್ಚುವರಿಗಳನ್ನು ಹೊಂದಿಸುವ ಅಗತ್ಯವಿರುತ್ತದೆ.

ಕೆಲವು ಷರತ್ತುಗಳ ಆಧಾರದಲ್ಲಿ ವಿಮಾ ಕಂಪನಿಯು ಯಾವುದೇ ಕ್ಲೇಮ್ಅನ್ನು ನಿರಾಕರಿಸಬಹುದು. ಕ್ಲೇಮ್ಅನ್ನು ನಿರಾಕರಿಸಲು ಕೆಲವು ಸಾಮಾನ್ಯ ಕಾರಣಗಳು ಇಂತಿವೆ:

  • ಪಾಲಿಸಿಯ ಅವಧಿಯು ಮುಗಿದಿದೆ, ಅಥವಾ ಪಾಲಿಸಿಯನ್ನು ರದ್ದುಗೊಳಿಸಲಾಗಿದೆ ಅಥವಾ ಪ್ರೀಮಿಯಂನ ಚೆಕ್ ಅಮಾನ್ಯವಾಗಿರುವುದರಿಂದ ಪಾಲಿಸಿಯು ಅಮಾನ್ಯವಾಗಿದೆ.
  • ಅಪಘಾತ ಅಥವಾ ನಷ್ಟದ ದಿನಾಂಕವು ಪಾಲಿಸಿಯ ಅವಧಿಯ ವ್ಯಾಪ್ತಿಯ ಹೊರಗಡೆ ಇರುವುದು ಕೂಡ ಒಂದು ಕಾರಣವಾಗಿರಬಹುದು ಅಥವಾ
  • ಅಪಘಾತದ ಸಮಯದಲ್ಲಿ ವಾಹನವನ್ನು ಚಾಲನೆ ಮಾಡುತಿದ್ದ ವ್ಯಕ್ತಿಯ ಬಳಿ ಮಾನ್ಯವಾದ ಚಾಲನಾ ಪರವಾನಗಿ ಹೊಂದಿಲ್ಲದಿರುವುದು ಅಥವಾ ಮಾದಕ ವಸ್ತುಗಳ ಅಥವಾ ಮದ್ಯದ ಪ್ರಭಾವದಡಿಯಲ್ಲಿ ಚಾಲನೆ ಮಾಡುತ್ತಿರುವುದು.
  • ವಾಹನದ ಮಾಲೀಕತ್ವವು ಬದಲಾಗಿರುವ ಸಂದರ್ಭಗಳು ಕೂಡ ಇರುತ್ತವೆ, ಆದರೆ ವಿಮಾ ಕಂಪನಿಗೆ ಅಂತಹ ಬದಲಾವಣೆ ನಡೆದ ಹದಿನಾಲ್ಕು ದಿನಗಳ ಒಳಗಾಗಿ ಅಂತಹ ಮಾಹಿತಿಯನ್ನು ಒದಗಿಸಿರುವುದಿಲ್ಲ ಅಥವಾ ಪಾಲಿಸಿಯು ಪ್ರಾರಂಭವಾಗುವ ಮೊದಲು ಅಸ್ತಿತ್ವದಲ್ಲಿದ್ದ ಹಾನಿಗಳಿಗೆ ಕ್ಲೇಮ್ ಇದ್ದಂತಹ ಪಕ್ಷದಲ್ಲಿ.
  • ಹಾನಿ ಸ್ವರೂಪವು ಅಪಘಾತದ ಕಾರಣದೊಂದಿಗೆ ತಾಳೆಯಾಗದ ಪಕ್ಷದಲ್ಲಿ ಅಥವಾ ವಾಹನವನ್ನು ಇತರೆ ವೈಯಕ್ತಿಕ ಅಥವಾ ಸಾಮಾಜಿಕ ಉದ್ದೇಶಗಳಿಗಲ್ಲದ ಸಂದರ್ಭದಲ್ಲಿ ಬಳಸಿದ್ದರೆ ಕೂಡ ಇತರೆ ಕಾರಣಗಳಾಗಬಹುದು.

Download Motor Policy

Feedback