PrintPrintEmail this PageEmail this Page

ಸದಾಚಾರ ಸಂಹಿತೆ:--

  • ಎಲ್ಲಾ ಪರವಾನಗಿ ಪಡೆದ ಪ್ರತಿನಿಧಿಗಳು ಕೆಳಗೆ ಸೂಚಿಸಲಾದ ಸದಾಚಾರ ಸಂಹಿತೆಗೆ ಬದ್ಧರಾಗಿರಬೇಕು:-

ಪ್ರತಿಯೊಬ ಪ್ರತಿನಿಧಿಯು

  • ತಾವು ನೇಮಿಸಿದ ವಿಮಾ ಕಾರ್ಯನಿರ್ವಾಹಕರು ಮತ್ತು ನಿರ್ದಿಷ್ಟ ವ್ಯಕ್ತಿಗಳು ಮಡಿದ ಯಲ್ಲ ಕೃತ್ಯ ಮತ್ತು ಲೋಪಗಳಿಗೆ ಜವಾಬ್ದಾರರಾಗಿರುತ್ತಾರೆ
  • ವಿಮಾ ಕಾರ್ಯನಿರ್ವಾಹಕ ಮತ್ತು ಎಲ್ಲ ನಿರ್ದಿಷ್ಟ ವ್ಯಕ್ತಿಗಳು ತಾವು ಮಾರಾಟ ಮಾಡುತ್ತಿರುವ ವಿಮಾ ಉತ್ಪನ್ನಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಮಾಹಿತಿ ಮತ್ತು ತರಬೇತಿ ಪಡೆದು, ನುರಿತ ಮತ್ತು ಪರಿಣತರಾಗಿರುವಂತೆ ಸುನಿಶ್ಚಿತಗೊಳಿಸುವುದು.
  • ವಿಮಾ ಕಾರ್ಯನಿರ್ವಾಹಕ ಮತ್ತು ನಿರ್ದಿಷ್ಟಪಡಿಸಿದ ವ್ಯಕ್ತಿಯು ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ಲಾಭಗಳು ಹಾಗು ಪಾಲಿಸಿಯ ಲಾಭಗಳ ಮೇಲೆ ಯಾವುದೇ ತಪ್ಪುನಿರೂಪಣೆಯನ್ನು ಸಂಭಾವ್ಯರಿಗೆ ಮಾಡದಿರುವಂತೆ ಸುನಿಶ್ಚಿತಗೊಳಿಸುವುದು;
  • ಯಾವುದೇ ಸಂಭಾವ್ಯರು ವಿಮೆ ಉತ್ಪನ್ನಗಳನ್ನು ಬಲವಂತವಾಗಿ ಖರೀದಿಸದಿರುವಂತೆ ಸುನಿಶ್ಚಿತಗೊಳಿಸುವುದು;
  • ವಿಮಾ ಉತ್ಪನ್ನಕ್ಕೆ ಸಂಬಂಧಿಸಿದಂತೆ ವಿಮೆದಾರರಿಗೆ ಸಾಕಷ್ಟು ಮಾರಾಟ ಪೂರ್ವ ಮತ್ತು ಮಾರಾಟದ ನಂತರದ ಸಲಹೆಗಳನ್ನು ನೀಡುವುದು;
  • ಕ್ಲೇಮ್ ನ ಸಂದರ್ಭದಲ್ಲಿ ಎಲ್ಲಾ ವಿಧಿವಿಧಾನಗಳು ಮತ್ತು ದಾಖಲಾತಿಗಳನ್ನು ಪೂರ್ಣಗೊಳಿಸಲು ವಿಮಾದಾರರಿಗೆ ಸಾಧ್ಯವಾದ ಎಲ್ಲಾ ಸಹಾಯ ಮತ್ತು ಸಹಕಾರ ಹಸ್ತವನ್ನು ಚಾಚುವುದು;
  • ಏಜೆಂಟರು ತಾವು ವಿಮಾನಷ್ಟ ಬರೆಯುವುದಿಲವೆಂದು, ವಿಮಾದಾರನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು, ವಿಮಾ ಕಂಪನಿ ಮತ್ತು ಏಜೆಂಟರು ಇವರಿಬರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ವ್ಯಾಖ್ಯಾನಿಸಿರುವ ಬಗ್ಗೆ ಸೂಕ್ತ ಪ್ರಚಾರವನ್ನು ನೀಡಬೇಕು
  • ಪ್ರತಿ ಪ್ರತಿನಿಧಿಯು ಅಥವಾ ವಿಮೆ ಕಾರ್ಯನಿರ್ವಾಹಕರು ಅಥವಾ ನಿಗದಿತ ವ್ಯಕ್ತಿಯು ಕೂಡ ಕೆಳಕಂಡ ಸದಾಚಾರ ಸಂಹಿತೆ ಅನುಸರಿಸಬೇಕು:
    • ಪ್ರತಿ ಪ್ರತಿನಿಧಿಯು/ ವಿಮಾ ಕಾರ್ಯನಿರ್ವಾಹಕರು / ನಿಗದಿತ ವ್ಯಕ್ತಿಯು, --
      • ತಾನು ಪ್ರತಿನಿಧಿಯಾಗಿರುವ ವಿಮಾ ಕಂಪನಿ ಯೊಂದಿಗೆ ಹಾಗು ಸ್ವತಃ ತನ್ನನ್ನು ತಾನು ಗುರುತಿಸಿಕೊಳ್ಳುವುದು;
      • ತನ್ನ ಪರವಾನಗಿ / ಪ್ರಮಾಣಪತ್ರವನ್ನು ಸಂಭಾವ್ಯರ ಬೇಡಿಕೆಯ ಮೇರೆಗೆ ಬಹಿರಂಗಪಡಿಸುವುದು;
      • ತನ್ನ ವಿಮೆದಾರರಿಂದ ಮಾರಾಟ ಮಾಡಲು ನೀಡುವ ವಿಮಾ ಉತ್ಪನ್ನಗಳ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಮಾಹಿತಿಯನ್ನು ಪ್ರಚಾರಮಾಡುವುದು ಹಾಗು ನಿರ್ದಿಷ್ಟ ವಿಮೆ ಯೋಜನೆಯನ್ನು ಶಿಫಾರಸು ಮಾಡುವಾಗ ಸಂಭ್ಯಾವರ ಅಗತ್ಯತೆಗಳನ್ನು ಪರಿಗಣಿಸುವುದು;
      • ಒಂದು ವೇಳೆ ಸಂಭಾವ್ಯರು ಕೇಳಿದರೆ, ಮಾರಾಟಕ್ಕೆ ನೀಡುತ್ತಿರುವ ವಿಮಾ ಉತ್ಪನ್ನದ ವಿಷಯಕ್ಕೆ ಸಂಬಂಧಿಸಿದಂತೆ ಕಮಿಷನ್ ದರಗಳನ್ನು ಬಹಿರಂಗಪಡಿಸುವುದು
      • ಮಾರಾಟಕ್ಕೆ ನೀಡುತ್ತಿರುವ ವಿಮಾ ಉತ್ಪನ್ನಕ್ಕೆ ವಿಮೆದಾರರು ವಿಧಿಸುವ ಪ್ರೀಮಿಯಂನನ್ನು ಸೂಚಿಸುವುದು;
      • ವಿಮಾದಾರರಿಂದ ಪ್ರಸ್ತಾಪಿತ ನಮೂನೆಯಲ್ಲಿ ಅಗತ್ಯವಿರುವ ಮಾಹಿತಿಯ ಸ್ವರೂಪ ಮತ್ತು ವಿಮಾ ಒಪ್ಪಂದವನ್ನು ಖರೀದಿಸಲು ವಾಸ್ತವಿಕ ಮಾಹಿತಿಯ ಬಹಿರಂಗಪಡಿಸುವಿಕೆಯ ಪ್ರಾಮುಖ್ಯತೆಯನ್ನು ಕೂಡ ಸಂಭಾವ್ಯರಿಗೆ ವಿವರಿಸುವುದು;
      • ವಿಮಾದಾರರಿಗೆ ಸಲ್ಲಿಸಲಾದ ಪ್ರತಿ ಪ್ರಸ್ತಾವನೆ ಒಳಗೊಂಡಂತೆ ವರದಿಯ ರೂಪದಲ್ಲಿ ("ವಿಮಾ ಪ್ರತಿನಿಧಿಯ ಗೌಪ್ಯ ವರದಿ" ಎಂದು ಕರೆಯಲ್ಪಡುವ) ಯಾವುದೇ ಪ್ರತಿಕೂಲ ಅಭ್ಯಾಸ ಅಥವಾ ಸಂಭಾವ್ಯರ ಆದಾಯದ ಅಸಮಂಜಸತೆಯ ಕುರಿತಾಗಿ ವಿಮೆದಾರನ ಗಮನಕ್ಕೆ ತರುವುದು ಹಾಗು ಸಂಭಾವ್ಯರ ಕುರಿತು ಎಲ್ಲಾ ಸಮಂಜಸವಾದ ವಿಚಾರಣೆಗಳನ್ನು ಮಾಡುವ ಮೂಲಕ ಪ್ರಸ್ತಾಪದ ಸ್ವೀಕಾರಕ್ಕೆ ಸಂಬಂಧಿಸಿದಂತೆ ವಿಮಾದಾರರ ವಿಮೆ ಅಂಡರ್ರೈಟಿಂಗ್ ನಿರ್ಧಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ವಾಸ್ತವಿಕ ಸತ್ಯವನ್ನು ಹೊರಗೆಡವುದು;
      • ವಿಮಾದಾರರು ಪ್ರಸ್ತಾವನೆಯನ್ನು ಸ್ವೀಕರಿಸಿರುವುದರ ಅಥವಾ ತಿರಸ್ಕರಿಸಿರುವುದರು ಕುರಿತು ಸಂಭಾವ್ಯರಿಗೆ ಒಡನೆಯೇ ತಿಳಿಸುವುದು;
      • ವಿಮೆದಾರರೊಂದಿಗೆ ಪ್ರಸ್ತಾವನೆ ನಮೂನೆಯನ್ನು ಸಲ್ಲಿಸುವ ಸಮಯದಲ್ಲಿ ಅಗತ್ಯವಾದ ದಾಖಲೆಗಳನ್ನು ಮತ್ತು ಪ್ರಸ್ತಾವನೆಯನ್ನು ಪೂರ್ಣಗೊಳಿಸಲು ವಿಮಾದಾರರಿಂದ ತರುವಾಯ ಕೇಳಲ್ಪಟ್ಟ ದಾಖಲೆಗಳನ್ನು ಪಡೆದುಕೊಳ್ಳುವುದು;
      • ವಿಮಾದಾರರಿಂದ ಕ್ಲೇಮ್ ಗಳ ಪಾವತಿಗೆ ಕೆಲವು ಅವಶ್ಯಕತೆಗಳನ್ನು ಅನುಸರಿಸುವಲ್ಲಿ ಪಾಲಿಸಿದಾರರಿಗೆ ಅಥವಾ ಕ್ಲೇಮ್ ಮಾಡುವವರಿಗೆ ಅಥವಾ ಫಲಾನುಭವಿಗಳಿಗೆ ಅಗತ್ಯವಾದ ನೆರವು ನೀಡುವುದು;
      • ಪ್ರತಿ ಪಾಲಿಸಿದಾರರಿಗೆ ನಾಮನಿರ್ದೇಶನ ಅಥವಾ ನಿಯೋಜನೆಯನ್ನು ಮಾಡಲು ಅಥವಾ ವಿಳಾಸದ ಬದಲಾವಣೆ ಅಥವಾ ಆಯ್ಕೆಗಳನ್ನು ಬಳಸಲು, ಸಂದರ್ಭಕ್ಕೆ ಅನುಗುಣವಾಗಿ ಸಲಹೆ ನೀಡಿ ಮತ್ತು ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಿ;
    • ಯಾವುದೇ ಪ್ರತಿನಿಧಿಯು/ ವಿಮಾ ಕಾರ್ಯನಿರ್ವಾಹಕರು / ನಿಶ್ಚಿತ ವ್ಯಕ್ತಿಯು ಈ ಕೆಳಗೆ ನೀಡಿರುವ ಅಂಶಗಳ ವಿರುದ್ಧ ನಡೆಕೊಳ್ಳಬಾರದು, ----

       

      • ಮಾನ್ಯವಾದ ಪರವಾನಗಿ / ಪ್ರಮಾಣಪತ್ರವನ್ನು ಹೊಂದಿರದೆ ವಿಮೆ ವ್ಯವಹಾರವನ್ನು ಪಡೆದುಕೊಳ್ಳಬಾರದು ಅಥವಾ ನಡೆಸಬಾರದು;
      • ಪ್ರಸ್ತಾವನೆ ನಮೂನೆಯಲ್ಲಿ ಯಾವುದೇ ವಾಸ್ತವಿಕ ಮಾಹಿತಿಯನ್ನು ವರ್ಜಿಸಲು/ನೀಡದಿರುವುದಕ್ಕೆ ಸಂಭಾವ್ಯರನ್ನು ಪ್ರಚೋದಿಸುವುದು;
      • ಪ್ರಸ್ತಾವನೆ ನಮೂನೆಯಲ್ಲಿ ಅಥವಾ ಪ್ರಸ್ತಾವನೆಯನ್ನು ಸ್ವೀಕರಿಸಲು ವಿಮಾದಾರರಿಗೆ ಸಲ್ಲಿಸಿದ ದಾಖಲೆಗಳಲ್ಲಿ ತಪ್ಪು ಮಾಹಿತಿಯನ್ನು ನೀಡಲು ಸಂಭಾವ್ಯರನ್ನು ಪ್ರಚೋದಿಸುವುದು;
      • ಸಂಭಾವ್ಯರೊಡನೆ ಅಸಭ್ಯ ರೀತಿಯಲ್ಲಿ ವರ್ತಿಸುವುದು;
      • ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಯಾವುದೇ ವಿಮಾ ಮಧ್ಯವರ್ತಿ ಪರಿಚಯಿಸಿದ ಯಾವುದೇ ಪ್ರಸ್ತಾಪನೆಯೊಂದಿಗೆ ಮಧ್ಯಪ್ರವೇಶಿಸುವುದು;
      • ತನ್ನ ವಿಮೆದಾರರು ಒದಗಿಸುವ ದರಗಳು, ಅನುಕೂಲಗಳು, ನಿಯಮಗಳು ಮತ್ತು ಷರತ್ತುಗಳ ಹೊರತಾಗಿ ಇತರೆ ದರಗಳು, ಅನುಕೂಲಗಳು, ನಿಯಮಗಳು ಮತ್ತು ಷರತ್ತುಗಳನ್ನು ನೀಡುವುದು;
      • ವಿಮಾ ಒಪ್ಪಂದದ ಅಡಿಯಲ್ಲಿ ಫಲಾನುಭವಿಗಳ ಆದಾಯದಿಂದ ಪಾಲನ್ನು ಸ್ವೀಕರಿಸುವುದು ಅಥವಾ ಅದಕ್ಕಾಗಿ ಒತ್ತಾಯಿಸುವುದು;
      • ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಅಂತ್ಯಗೊಳಿಸಲು ಪಾಲಿಸಿದಾರನನ್ನು ಒತ್ತಾಯಿಸುವುದು ಮತ್ತು ಅಂತಹ ಅಂತ್ಯದ ದಿನಾಂಕದಿಂದ ಮೂರು ವರ್ಷಗಳ ಅವಧಿಯ ಒಳಗಾಗಿ ಅವರಿಂದ ಹೊಸ ಪ್ರಸ್ತಾಪವನ್ನು ಜಾರಿಗೊಳಿಸುವುದು;
      • ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಅಥವಾ ಒಂದು ಗುಂಪಿನಿಂದ ವಿಮೆಯ ವ್ಯವಹಾರದ ಖಾತೆಯನ್ನು ಯಾವುದೇ ಪ್ರತಿನಿಧಿಯು ಪಡೆದ ಪ್ರೀಮಿಯಂ ಯಾವುದೇ ವರ್ಷದಲ್ಲಿ ಗಳಿಸಿರುವ ಒಟ್ಟು ಪ್ರೀಮಿಯಂನ ಐವತ್ತು ಪ್ರತಿಶತಕ್ಕಿಂತ ಹೆಚ್ಚು ಇರಬಾರದು
      • ಗೊತ್ತುಪಡಿಸಿದ ವ್ಯಕ್ತಿಯು ಈ ಮೊದಲು ಅವರ ಪರವಾನಗಿಯನ್ನು ರದ್ದುಗೊಳಿಸಿದ್ದರೆ ಮತ್ತು ಇಂತಹ ರದ್ದತಿಯ ದಿನಾಂಕದಿಂದ ಐದು ವರ್ಷಗಳ ಅವಧಿಯು ಪೂರ್ಣಗೊಂಡಿರದಿದ್ದರೆ, ವಿಮಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲು ಹೊಸ ಪರವಾನಗಿಗೆ ಅರ್ಜಿ ಸಲ್ಲಿಸಬೇಕು;
      • ಯಾವುದೇ ವಿಮಾ ಕಂಪನಿಯ ನಿರ್ದೇಶಕರಾಗಲು ಅಥವಾ ಉಳಿಯಲು;
    • ಪ್ರತಿ ಪ್ರತಿನಿಧಿಯು, ಈಗಾಗಲೇ ಅವರ ಮೂಲಕ ದೊರಕಿಸಿಕೊಂಡಿರುವ ವಿಮೆ ವ್ಯವಹಾರವನ್ನು ಸಂರಕ್ಷಿಸುವ ದೃಷ್ಟಿಯಿಂದ, ಪಾಲಿಸಿದಾರರಿಗೆ ಮೌಖಿಕವಾಗಿ ಮತ್ತು ಬರವಣಿಗೆಯ ಮುಖೇನ ಸೂಚನೆ ನೀಡುವ ಮೂಲಕ, ನಿಗದಿತ ಸಮಯದೊಳಗೆ ಪಾಲಿಸಿದಾರರಿಂದ ಪ್ರೀಮಿಯಂಗಳನ್ನು ರವಾನೆ ಮಾಡುವುದನ್ನು ಸುನಿಶ್ಚಿತಗೊಳಿಸಲು ಪ್ರತಿಯೊಂದು ಪ್ರಯತ್ನವನ್ನು ಮಾಡಬೇಕು;
    • ಯಾವುದೇ ಕಂಪೆನಿಯ ನಿರ್ದೇಶಕ ಅಥವಾ ಸಂಸ್ಥೆಯ ಪಾಲುದಾರ ಅಥವಾ ಮುಖ್ಯ ಕಾರ್ಯನಿರ್ವಾಹಕ ಅಥವಾ ವಿಮಾ ಕಾರ್ಯನಿರ್ವಾಹಕ ಅಥವಾ ನಿಶ್ಚಿತ ವ್ಯಕ್ತಿಯು ಯಾವುದೇ ಇತರೆ ವಿಮಾ ಕಂಪೆನಿಯ ಮತ್ತೊಂದು ಪ್ರತಿನಿಧಿಯೊಡನೆ ಇದೇ ರೀತಿಯ ಸ್ಥಾನಮಾನವನ್ನು ಹೊಂದಿರಬಾರದು.

Download Motor Policy

Feedback

Unable to open file!