PrintPrintEmail this PageEmail this Page

ಒಬ್ಬ ವಿಮಾ ಏಜೆಂಟ್ ಆಗುವುದು ಹೇಗೆ:

ಅರ್ಹತೆ:

  • ಭಾರತೀಯ ಪ್ರಜೆ.
  • ವಯಸ್ಸು 18ವರ್ಷಗಳಾಗಿರ ಬೇಕು.
  • ಕನಿಷ್ಟ ವಿದ್ಯಾರ್ಹತೆ:
    • I ಗ್ರಾಮೀಣ: - 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು (ಗ್ರಾಮೀಣ ಪುರಾವೆಯು ಅಗತ್ಯ. ಅದು ಬಿಡಿಓ ದಿಂದ ವಿತರಿಸಲಾದ ಪ್ರಮಾಣಪತ್ರ ಅಥವಾ 5000ಕ್ಕಿಂತ ಕಡಿಮೆ ಜನಸಂಖ್ಯೆಯ ಒಂದು ನಿರ್ಧಿಷ್ಟ ಹಳ್ಳಿಯ ನಿವಾಸಿಗೆ ವ್ಯಕ್ತಿಯು ತಮ್ಮ ಗ್ರಾಮದವರೇ ಎಂದು ಪಂಚಾಯಿತಿ ಮುಖ್ಯಸ್ಥರು ಬರೆದುಕೊಡಬೇಕು)
    • II ನಗರ ಪ್ರದೇಶ:- 12ನೇ ತರಗತಿಯಲ್ಲು ಉತ್ತೀರ್ಣರಾಗಿರಬೇಕು
  • ಪಾನ್ ಸಂಖ್ಯೆ.
  • ಆತನ/ಆಕೆಯ ಯಾವುದೇ ಸಂಬಂಧಿಗಳು, ಒಪ್ಪಂದವನ್ನು ಪ್ರವೇಶಿಸುವ ಸಮಯದಲ್ಲಿ, ಕಂಪನಿಯ ಯಾವುದೇ ವಿಭಾಗದಲ್ಲಿ ನೌಕರರಾಗಿರಬಾರದು.("ಸಂಬಂಧಿಗಳು" ಎಂದರೆ ಗಂಡ/ಹೆಂಡತಿ, ಅವಲಂಬಿತ ಮಕ್ಕಳು ಅಥವಾ ಅವಲಂಬಿತ ಮಲ ಮಕ್ಕಳು ನೌಕರರೊಂದಿಗೆ ವಾಸಿಸುತ್ತಿರಬಹುದು ಅಥವಾ ಇಲ್ಲದಿರಲು ಬಹುದು.)
  • ಒಬ್ಬ ವ್ಯಕ್ತಿಯು ಯಾವುದೇ ಇತರೆ ಸಾಮಾನ್ಯ ವಿಮಾ ಕಂ. ಯಿಂದ ಏಜೆನ್ಸಿ ಪರವಾನಿಗಿ ಪಡೆದಿರಬಾರದು. (ಜೀವ ವಿಮಾ ಏಜೆಂಟರು ಈ ಕೇಳಗಿನ ಮಿಶ್ರ ಪ್ರಕ್ರಿಯೆಗಳನ್ನು ಪಾಲಿಸಬೇಕು)

ಅಗತ್ಯವಿರುವ ದಸ್ತಾವೇಜುಗಳು:

  • ಏಜೆಂಟ್ ಅರ್ಜಿ ನಮೂನೆ.
  • ಪ್ರಾಯೋಜಕರ ನಮೂನೆ.
  • ಜನ್ಮ ದಿನಾಂಕದ ಪುರಾವೆ.
  • ವಿದ್ಯಾರ್ಹತೆಯ ಪುರಾವೆ.
  • ಪಾನ್ ಕಾರ್ಡ್.
  • ಮೂರು ಸ್ಟಾಂಪ್ ಅಳತೆಯ ಭಾವಚಿತ್ರಗಳು
  • ವಿಳಾಸ ಪುರಾವೆ.
  • ಮೊಬೈಲ್ ಸಂಖ್ಯೆ.
  • ಇಮೇಲ್ ವಿಳಾಸ.
  • ಭಾವಚಿತ್ರ ಮತ್ತು ಸಹಿ jpg ಫಾರ್ಮೆಟ್ ನಲ್ಲಿ. (ಫೈಲ್ ಗಾತ್ರವು ಫೋಟೊಗಾಗಿ 50ಕೆಬಿ ಗಿಂತ ಕಡಿಮೆ ಇರಬೇಕು ಮತ್ತು ಸಹಿಗಾಗಿ 10ಕೆಬಿ ಗಿಂತ ಕಡಿಮೆ ಇರಬೇಕು

ಐ.ಆರ್.ಡಿ.ಎ ತರಬೇತಿ :

ಒಬ್ಬ ವಿಮಾ ಏಜೆಂಟ್ ನಂತೆ ವರ್ತಿಸಲು ಪರವಾನಿಗಿಗೆ ಅರ್ಜಿ ಸಲ್ಲಿಸಿರುವ ಒಬ್ಬ ಅರ್ಜಿದಾರನು ಐ.ಆರ್.ಡಿ.ಎ-ಅಂಗೀಕೃತ ಸಂಸ್ಥೆಯಿಂದ ಸಂಪೂರ್ಣ ತರಬೇತಿಯನ್ನು ಪಡೆಯಬೇಕು, ಕನಿಷ್ಟ 50 ಗಂಟೆಗಳ ಪ್ರಾಯೋಗಿಕ ತರಬೇತಿಯನ್ನು ಸಾಮಾನ್ಯ ವಿಮಾ ವ್ಯಾಪಾರದ ಬಗ್ಗೆ ಪಡೆಯಬೇಕು, ಅದು ಒಂದು ವಾರದ ವರೆಗೂ ಮುಂದುವರಿಯಬಹುದು.ಆತನ ಪರವಾನಿಗಿಯನ್ನು ನವೀಕರಿಸಲು, ಏಜೆಂಟ್ ಕೇವಲ 25ಗಂಟೆಗಳ ತರಬೇತಿಯನ್ನು ಪಡೆಯಬೇಕು.ತರಬೇತಿ ವೆಚ್ಚವನ್ನು ಐ.ಎಫ್.ಎಫ್.ಸಿ.ಒ ಟೋಕಿಯೊದಿಂದ ಭರಿಸಲಾಗುವುದು.

ಐ.ಆರ್.ಡಿ.ಎ ಪರೀಕ್ಷೆ:

ಐ.ಆರ್.ಡಿ.ಎ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಅಭ್ಯರ್ಥಿಯು ಏಜೆನ್ಸಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಪರೀಕ್ಷೆಯ ಶುಲ್ಕವೂ ’350.00 ಅದನ್ನು ಏಜೆಂಟರೇ ಪಾವತಿಸಬೇಕು.ಡಿಡಿಯು ಪರೀಕ್ಷಾ ಪ್ರಾಧಿಕಾರದ ಹೆಸರಿನಲ್ಲಿ ಬೇಕು ಅಂದರೆ NSE. IT.ಪರೀಕ್ಷ ಕೇಂದ್ರವೂ ಪರೀಕ್ಷೆಯ ನಂತರ ಅಂಕ ಪಟ್ಟಿಯನ್ನು ಅಭ್ಯರ್ಥಿಗೆ ನೀಡುತ್ತದೆ.

ತೇರ್ಗಡೆಯಾದ ಅಭ್ಯರ್ಥಿಯು ಪರವಾನಿಗಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ನೀಡಬೇಕು.

  • ನಮೂನೆ ವಿಎ
  • ಏಜೆನ್ಸಿ ಒಪ್ಪಂದ
  • ಅಂಕ ಪಟ್ಟಿಯ ಪ್ರತಿ (ಪರೀಕ್ಷ ಕೇಂದ್ರದಲ್ಲಿ ನೀಡಿದ್ದು)
  • ಪರವಾನಿಗಿ ಶುಲ್ಕ(ಐ.ಎಫ್.ಎಫ್.ಸಿ.ಒ ಟೋಕಿಯೊ ಜೆನ್. ಇನ್ಸ್. ಕಂ. ಲಿ ಹೆಸರಿನಲ್ಲಿ ಅಭ್ಯರ್ಥಿಯಿಂದ ನೀಡಲಾದ ’250.00ರ ಚೆಕ್)

 


Download Motor Policy

Feedback