PrintPrintEmail this PageEmail this Page

ನೀವೇಕೆ ಸಾಮಾನ್ಯ ವಿಮೆಯ ಏಜೆಂಟರಾಗಿ ಸೇರಿಕೊಳ್ಳಬೇಕು:

ಆರ್ಥಿಕ ವಲಯದ ಹೊರಗಿನ ಕೆಲವು ಉದ್ಯಮಗಳು ಅವರ ಮೊದಲ ವರ್ಷದ ನೇಮಕಾತಿಯ ಒಳಗಾಗಿಯೇ ಒಂದು ಗಮನಾರ್ಹ ಅದಾಯವನ್ನು ಮಾಡಲು ವೃತ್ತಿಪರರಿಗೆ ಅವಕಾಶವನ್ನು ಕಲ್ಪಿಸುತ್ತವೆ. ಆರ್ಥಿಕ ಸೇವೆಗಳ ಉದ್ಯಮದ ಒಳಗೆಯೇ,ಬ್ಬ ಸಾಮಾನ್ಯ ವಿಮಾ ಏಜೆಂಟ್ನಂತೆಯೇ, ಕೆಲವು ವೃತ್ತಿಗಳು ಒಂದು ತ್ವರಿತ ಹಾಗು ದೊಡ್ಡ ಸಂಬಳ ಪಡೆಯುವ ಅವಕಾಶವನ್ನ ನೀಡುತ್ತವೆ ನಿಜವಾಗಿಯೂ, ಒಬ್ಬ ಕಠಿಣ-ಪರಿಶ್ರಮದ ವಿಮಾ ಏಜೆಂಟ್ ಸುಲಭವಾಗಿ ಆತನ ಅಥವಾ ಆಕೆಯ ಮೊದಲ ವರ್ಷದ ಮಾರಟದಲ್ಲಿ ರೂ. 200,000ಗಳನ್ನು ಗಳಿಸಬಹುದು. ಹಾಗಾಗಿ ಒಂದುವೇಳೆ ನಿಮಗೆ ಹೆಚ್ಚಿನ ಸಾಮರ್ಥ್ಯವಿದ್ದರೆ ಮತ್ತು ಒಳ್ಳೆಯ ಸಂಬಂಧವನ್ನು ನಿರ್ಮಿಸುವ ಚಾಕಚಕ್ಯತೆ ಇದ್ದರೆ, ಇದು ನಿಮಗಾಗಿ ಮಾಡಿಸಿರುವ ಒಂದು ಕ್ಷೇತ್ರ.

ಭಾರತದ ಜೀವ-ರಹಿತ ವಿಮಾ ವಲಯವು ಒಂದು ಬೆಳೆಯುತ್ತಿರುವ ಕ್ಷೇತ್ರ ಉದ್ಯಮವೂ ಹಲವು ವರ್ಶಗಳಿಂದ ಸಂಪೂರ್ಣವಾಗಿ ಬೆಳೆದಿದೆ. ಇಲ್ಲಿ ಒಂದು ವ್ಯಾಪಕವಾದ, ಇನ್ನು ಭೇದಿಸದ ವ್ಯಾಪಾರಿ ಅವಕಾಶವಿದೆ, ವಿಶೇಷವಾಗಿ ಮಹನಗರಗಳಲ್ಲದ ಅರೆ-ನಗರ ಪ್ರದೇಶಗಳಲ್ಲಿ ಜೀವ-ರಹಿತ ವಿಮಾ ಅಗತ್ಯತೆಗಳು ಸಹ ಮಾರುಕಟ್ಟೆಯಲ್ಲಿ ಹೆಚ್ಚುತ್ತಿವೆ. ಆಸಕ್ತಿಕರವಾಗಿ,ಮುಕ್ತ ಬೆಲೆಯ ಪರಿಸ್ಥಿತಿಯಲ್ಲಿ -ಸಾಮಾನ್ಯ ವಿಮಾ ಕಂಪನಿಗಳು ವಿಮಾಕಂತುಗಳನ್ನು ನಿರ್ಧರಿಸಲು ಹಾಗು ರಿಯಾಯಿತಿಯನ್ನು ಒದಗಿಸಲು ಮುಕ್ತರಾಗಿದ್ದಾರೆ, ಅಂತೆಯೇ ವಲಯಕ್ಕೆ ಅಗತ್ಯವಿರುವ ಒಂದು ವೇಗವನ್ನು ಸಹ ಒದಗಿಸುವ ಭರವಸೆಯನ್ನು ನೀಡುತ್ತದೆ.

ಅಂತೆಯೇ ಇಲ್ಲಿ ಹಲವಾರು ಬಗೆಯ ಸಾಮಾನ್ಯ ವಿಮೆಗಳಿವೆ, ಆದರೆ ಯಾರು ಆಟೊ ಮತ್ತು ಆರೋಗ್ಯ ವಿಮೆಗಳನ್ನು ಮಾರುತ್ತಾರೆಯೋ ಅವರು ವಿಮಾ ಕ್ಷೇತ್ರದಲ್ಲಿ ಉತ್ತಮವಾದ ಹಣವನ್ನು ಗಳಿಸುತ್ತಾರೆ. ವಿಮಾ ಮಾರುಕಟ್ಟೆಯ ಈ ಕೋನದಲ್ಲಿ ಗಮನಹರಿಸುವ ಏಜೆಂಟರು ಕುಟುಂಬಗಳನ್ನು, ವ್ಯಾಪಾರಗಳನ್ನು, ಉದ್ಯೋಗದಾತರನ್ನು, ಮತ್ತು ಇತರೆ ವ್ಯಕ್ತಿಗಳು , ಯಾರದರು ಖಾಯಿಲೆ ಬಿದ್ದಾಗ ಅಥವಾ ವಾಹನವೂ ಹಾನಿಗೊಳಗಾದಾಗ ಸಂಭವಿಸುವ ಒಂದು ಆರ್ಥಿಕ ನಷ್ಟದಿಂದ ಸಂರಕ್ಷಿಸಲು ಸಹಕಾರಿಯಾಗುತ್ತಾರೆ.

ಸಹಜ ವಿಮಾ ಏಜೆಂಟರು ಆತನ ಅಥವಾ ಆಕೆಯ ಸಮಯವನ್ನು ಕೆಲವು ಬಗೆಯ ಮಾರಾಟ ಚಟುವಟಿಕೆಗಳಲ್ಲಿ ಕಳೆಯುತ್ತಾರೆ, ಯಾರಿಗಾದರು ಹೊಸ ಅಥವಾ ಹೆಚ್ಚುವರಿ ವಿಮಾ ರಕ್ಷಣೆಯ ಅಗತ್ಯವಿದೆಯೇ ಎಂದು ಗುರುತಿಸುತ್ತಾರೆ, ಅವರಿಗೆ ಐ.ಎಫ್.ಎಫ್.ಸಿ.ಒ ಟೋಕಿಯೊದಿಂದ ಪ್ರಸ್ತಾವನೆಯನ್ನು ಒದಗಿಸುತ್ತಾರೆ ಹಾಗೂ ಅವರನ್ನು ಹೊಸ ವಿಮಾ ಒಪ್ಪಂದವನ್ನು ಸಹಿ ಮಾದುವಂತೆ ಪ್ರೇರೇಪಿಸುತ್ತಾರೆ.

ಸಹಜವಾಗಿಯೇ, ಒಬ್ಬ ಸಾಮಾನ್ಯ ವಿಮಾ ಏಜೆಂಟರು ಗ್ರಾಹಕರಿಂದ ಮೊದಲನೆ ವರ್ಷ ಮತ್ತು ಮುಂಬರುವ ವರ್ಷಗಳಲ್ಲಿನ ಒಟ್ಟು ಪಾವತಿಸಿದ ಮೊತ್ತದ (ಸಹಜವಾಗಿ ವಿಮಾ ಕಂತು ಎಂದು ಕರೆಯುತ್ತಾರೆ) 10%ವನ್ನು ಪಡೆಯುತ್ತಾರೆ.

ಒಂದು ಉದಾಹರಣೆಯನ್ನು ನೋಡೋಣ:-

ರಾಮ್-ವಿಮಾ ಏಜೆಂಟ್ ಆಟೋ ಪಾಲಿಸಿಯನ್ನು ಮಾರುತ್ತಾರೆ ಅದು ಗ್ರಾಹಕರ ವಾಹನಕ್ಕೆ ಸಂಪೂರ್ಣ ವರ್ಷ್ ವಿಮಾ ರಕ್ಷಣೆಯನ್ನು ನೀಡುತ್ತದೆ. ರಾಮ್ ನ ವಿಮಾ ಕಂಪನಿಯು ಆಟೊ ಪಾಲಿಸಿಯ ಮೇಲೆ 10% ಕಮೀಷನ್ ಪಾವತಿಸುತ್ತದೆ, ಅಂದರೆ ಮಾರಾಟ ಪ್ರತಿನಿಧಿಯು ಮೊದಲ ವರ್ಷದ ವಿಮಾ ಕಂತಿನ 10% ಮತ್ತು ಭವಿಷ್ಯದ ನವೀಕರಣಗಳ 10%ವನ್ನು ಸ್ವೀಕರಿಸುತ್ತಾನೆ.

ಗ್ರಾಹಕರು ಪಾಲಿಸಿ ಮೊತ್ತವು ವರ್ಷಕ್ಕೆ ರೂ.10,000ಗಳು. ಹಾಗಾಗಿ, ಮೊದಲನೇ ವರ್ಷದಲ್ಲಿ, ರಾಮ್ ಈ ಆಟೊ ಪಾಲಿಸಿಯನ್ನು ಮಾರಿದ್ದಕ್ಕಾಗಿ ರೂ.1000ರ ಕಮೀಷನ್ ಪಡೆಯುತ್ತಾನೆ (ರೂ 10,000 x 10%). ಮುಂದಿನ ಎಲ್ಲಾ ವರ್ಷಗಳಲ್ಲಿಯೂ, ಎಲ್ಲಿಯವರೆಗೂ ಗ್ರಾಹಕನು ವಿಮಾಕಂತನ್ನು ಪಾವಿತಸಲೂ ಮುಂದುವರಿಸುತ್ತಾನೋ ಅಲ್ಲಿಯವರೆಗೂ ರಾಮ್ ನವೀಕರಣಗಳಲ್ಲಿ 10%ವನ್ನು ಪಡೆಯುತ್ತಾನೆ.   ಈ ರೀತಿಯಾಗಿ ರಾಮ್ ಕೇವಲ ಒಂದು ಅಥವಾ ಎರಡು ಪಾಲಿಸಿಗಳನ್ನು ಪ್ರತಿ ವಾರ ಮಾರಿದ್ದೇ ಆದರೆ, ಅದು ಆತನಿಗೆ ಒಬ್ಬ ಏಜೆಂಟ್ ನಾಗಿ ಮೊದಲ ವರ್ಷಕ್ಕೆ ರೂ.50,000 ದಿಂದ ರೂ. 100,000 ವನ್ನು ಗಳಿಸಿಕೊಡುತ್ತದೆ.


Download Motor Policy

Feedback